ಭಟ್ಕಳ: ಇಲ್ಲಿನ ನಿವೃತ್ತ ಸರಕಾರಿ ನೌಕರರ ಸಂಘದ “ವಾರ್ಷಿಕ ಮಹಾಸಭೆ”ಯು (Annual General Meeting) ವಿ ಡಿ ಆಚಾರ್ಯ ಅಧ್ಯಕ್ಷತೆಯಲ್ಲಿ ಭಟ್ಕಳ (Bhatkal) ಅರ್ಬನ್ ಬ್ಯಾಂಕ್ (Urban Bank) ಸಭಾಭವನದಲ್ಲಿ ಯಶಸ್ವಿಯಾಗಿ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಾರ್ಷಿಕ ಮಹಾಸಭೆಯನ್ನು (Annual General Meeting) ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷೆ ಮೆಹಬೂಬಿ ಬಿ ಪಟೇಲ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, “ಇಂತಹ ಕಾರ್ಯಕ್ರಮಗಳು ಪ್ರತಿ ವರ್ಷ ನಿವೃತ್ತ ನೌಕರರಿಂದ ನಡೆಯುತ್ತಿರಬೇಕು. ಇದರಿಂದ ನಿವೃತ್ತ ನೌಕರರರು ಕಾರ್ಯಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಸಂಘವು ಪ್ರತಿ ವರ್ಷ ಹಿರಿಯ ನೌಕರರನ್ನು ಪ್ರೋತ್ಸಾಹಿಸಿ ಗೌರವಿಸಬೇಕೆಂದರು. ಭಟ್ಕಳ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಎನ್ ನಾಯ್ಕ ಭಾಗವಹಿಸಿ, ನಮ್ಮ ನೌಕರರ ಸಂಘದಿಂದ ನಿವೃತ್ತ ನೌಕರರಿಗೂ ಎಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿದ್ದ ನಿವೃತ್ತ ಅಧಿಕಾರಿ ಎ ಎನ್ ಶೆಟ್ಟಿ ಶುಭ ಹಾರೈಸಿದರು.
Ramadan stalls/ ೩೬ ರಂಜಾನ್ ಮಳಿಗೆಗೆ ೧೩೫೯ ಅರ್ಜಿ: ಲಾಟರಿ ಮೂಲಕ ಹಂಚಿಕೆ
೭೫ ವರ್ಷ ಮೇಲ್ಪಟ್ಟ ಎಂಟು ಮಂದಿ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಭೆಯಲ್ಲಿ ಭಾಗವಹಿಸಿದ ೭೦ ಸದಸ್ಯರಲ್ಲಿ ೨೫ ಜನ ಸದಸ್ಯರನ್ನು ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಕಮಿಟಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
Woman hit by bike/ ಕಡವೆ ತಪ್ಪಿಸಲು ಹೋಗಿ ಮಹಿಳೆಗೆ ಬೈಕ್ ಡಿಕ್ಕಿ
ರೋಹಿಣಿ ವೆರ್ಣೇಕರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿವೃತ್ತ ತಹಶೀಲ್ದಾರ ಎ ಎ ಘನಿ ಸ್ವಾಗತ ಕೋರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ ಆರ್ ನಾಯ್ಕ ಸಂಘದ ವರದಿ ವಾಚನ ಮಾಡಿದರು. ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಜಿ ಎನ್ ನಾಯ್ಕ ನಿರೂಪಿಸಿದರು. ಎಂ ಡಿ ನಾಯ್ಕ ವಂದನಾರ್ಪಣೆ ಮಾಡಿದರು.



