ಭಟ್ಕಳ: ತಾಲೂಕಿನ ಮುರ್ಡೇಶ್ವರ (Murudeshwar) ಸುತ್ತಮುತ್ತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಭಟ್ಕಳ (Bhatkal) ಮೂಲದ ಇನಾಯತುಲ್ಲಾ ತಂದೆ ರಸೂಲ್ ಸಾಬ್ ಸವಣೂರು ಎಂಬಾತನನ್ನು ಮುರ್ಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆತನಿಂದ 32 ಗ್ರಾಂ ಮಾದಕ ವಸ್ತು ಮತ್ತು ಕೃತ್ಯಕ್ಕೆ ಬಳಸಿದ ಒಂದು ಬೈಕ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಾಡಿಸಿರುವ ಘಟನೆ ನಡೆದಿದೆ. ಇತ್ತೀಚಿಗಷ್ಟೇ ಬೈಲೂರಿನಲ್ಲಿ ಕಲ್ಲು ತೂರಿದ ಅಪ್ರಾಪ್ತರಿಗೆ ಮಾದಕ ವಸ್ತು ಸರಬರಾಜು ಮಾಡಿದ್ದ ಭಟ್ಕಳದ ಕಾರಗದ್ದೆಯ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು
Holi festival/ ಖಾರ್ವಿ ಸಮಾಜದ ಹೋಳಿ ಹಬ್ಬ-ಕಡಲ ತೀರದಲ್ಲಿ ವಿಶಿಷ್ಟ ಆಚರಣೆ
ಮುರ್ಡೇಶ್ವರ ವೃತ್ತ ನಿರೀಕ್ಷಕ ಜಗದೀಶ್ ಹಂಚನಾಳ್, ಮುರ್ಡೇಶ್ವರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಹಣಮಂತ ಬಿರಾದಾರ್, ಲೋಖನಾಥ್ ರಾಠೋಡ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸಿಬ್ಬಂದಿ ಅರುಣ್ ಪಿಂಟೋ, ಸುಬ್ರಹ್ಮಣ್ಯ, ಮಂಜುನಾಥ ಲಕ್ಮಾಪುರ, ಮಂಜುನಾಥ ಮಡಿವಾಳ ಮತ್ತು ಸಂದೀಪ ಪಟಗಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Fuel shortage/ ಇಂಧನ ವ್ಯತ್ಯಯ ಭೀತಿ: ಭಟ್ಕಳದ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲು



