ಭಟ್ಕಳ (Bhatkal) : ಸ್ವದೇಶ, ಸ್ವಭಾಷ, ಸ್ವಭೂಷ, ನಮ್ಮ ತಾಯ್ನಾಡು, ನಮ್ಮ ಮಾತೃಭಾಷೆ ಹಾಗೂ ನಮ್ಮ ಅಸ್ಮಿತೆಯನ್ನು ನಾವು ಮರೆಯದೇ ಅದನ್ನು ಉಳಿಸಿ ಪೋಷಿಸಬೇಕೆಂದು ಮಂಗಳೂರು ಮುಕ್ಕಾದ ಶ್ರೀನಿವಾಸ ಯುನಿವರ್ಸಿಟಿಯ ಪ್ರಾಧ್ಯಾಪಕ ಶ್ರೀನಾಥ ರಾವ್ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ (Anual day) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ.ಯು. ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ (Anual day) ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ “ಸಾಧನಾ ೨೦೨೪-೨೦೨೫” ನ್ನು ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡದ ಅನೇಕ ವಿದ್ಯಾಲಯಗಳಿಗೆ ಭೇಟಿ ನೀಡಿದ್ದೇನೆ. ಈಗಿನ ಆಧುನಿಕ ಶಿಕ್ಷಣದ ಜೊತೆಗೆ ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಸಿ.ಇ.ಟಿ/ನೀಟ್ ಸಿದ್ಧತೆ, ಭಗವದ್ಗೀತೆ ಪಠಣ, ಮೌಲ್ಯಯುತ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳು ಹೀಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಏಕೈಕ ಸಂಸ್ಥೆ ಇದಾಗಿದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಇದನ್ನೂ ಓದಿ : ಉಳ್ಳವರಿಗೊಂದು, ಬಡವರಿಗೊಂದು ಕಾನೂನಾ ?

ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಸುಮಿತ್ರಾ ಕೌಶಿಕ ಮತ್ತು ರಮೇಶ ಖಾರ್ವಿ ಉಪಸ್ಥಿತರಿದ್ದರು.

ಇದನ್ನೂ ಓದಿ: ARREST/ ಭಟ್ಕಳದಲ್ಲಿ ಗಾಂಜಾ ಘಾಟು

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ೩೪ ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ವಿಭಾಗವಾರು ಅತ್ಯುತ್ತಮ ವಿದ್ಯಾರ್ಧಿಗಳಾಗಿ ಕಲಾ ವಿಭಾಗದಲ್ಲಿ ತೇಜಸ್ ಗೊಂಡ, ವಾಣಿಜ್ಯದ ಗಣಕ ಶಾಸ್ತ್ರ ವಿಭಾಗದಲ್ಲಿ ದೀಪಾ ಈಶ್ವರ ನಾಯ್ಕ, ವಾಣಿಜ್ಯದ ಸಂಖ್ಯಾ ಶಾಸ್ತ್ರ ವಿಭಾಗದಲ್ಲಿ ಪವಿತ್ರಾ ರಘುರಾಮ ಮಡಿವಾಳ, ವಿಜ್ಞಾನ ವಿಭಾಗದಲ್ಲಿ ಮತ್ತು ಮಹಾವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿಯಾಗಿ ತಿಲಕ ಹೆಬ್ಬಾರ ಆಯ್ಕೆಯಾದರು.

ಇದನ್ನೂ ಓದಿ: ಮದ್ಯ ಸೇವಿಸಿ ಬೈಕ್‌ ಚಲಾಯಿಸಿದವಗೆ ಬಿತ್ತು ದಂಡ

ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಲಾವಣ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅನೂಷಾ ನಾಯ್ಕ ಸ್ವಾಗತಿಸಿದರು. ಪರಮೇಶ್ವರ ಮತ್ತು ಅನನ್ಯಾ ನಾಯ್ಕ ನಿರೂಪಿಸಿದರು. ಮಂಜೂಷಾ ಕೇಶಕಾಮತ ವಂದಿಸಿದರು.

ಇದನ್ನೂ ಓದಿ:  ಬಹರೇನ್‌ನಲ್ಲಿ ಭಟ್ಕಳದ ಕಲಾವಿದನ ಪ್ರದರ್ಶನ