ಭಟ್ಕಳ (Bhatkal): ಶ್ರೀ ಗುರು ರಾಘವೇಂದ್ರ (Guru Raghavendra) ಸಾರ್ವಭೌಮರ ೩೫೩ನೇ ಆರಾಧನಾ ಮಹೋತ್ಸವವು (Aradhana Mahotsav) ಇಲ್ಲಿನ ಮಾರುತಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ಮಂಗಳವಾರ ಆರಂಭಗೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇಂದು ಬೆಳಿಗ್ಗೆ ೮ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ಆರಾಧನಾ ಮಹೋತ್ಸವ (Aradhana Mahotsava) ಆರಂಭಗೊಂಡಿತು. ನಂತರ ಭಕ್ತರ ಹಸ್ತದಿಂದ ಶ್ರೀಗುರು ಸಾರ್ವಭೌಮರ ಪಾದ್ಯಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಿತು. ಮಧ್ಯಾಹ್ನ ಮಹಾಪೂಜೆ ನೆರವೇರಿತು. ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ರಥೋತ್ಸವ ಮಹಾಪೂಜೆ ನಂತರ ಪ್ರಸಾದ ವಿತರಣೆ ನಡೆಯಿತು.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳ ಪುರಸಭೆಯ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಈ ಸಮಯದಲ್ಲಿ ಸಮಯದಲ್ಲಿ ಶ್ರೀ ಮಠದಲ್ಲಿ ಜರಗುವ ವಿಶೇಷ ರಥೋತ್ಸವ ಸೇವೆ, ಮಹಾಪೂಜೆ, ಅಲಂಕಾರ ಸಹಿತ ಪೂಜೆ, ಸಾಮೂಹಿಕ ರಥೋತ್ಸವ, ಸಾಮೂಹಿಕ ಗಣಹೋಮ, ವಿಶೇಷ ಪಾದ್ಯ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ, ವಿಶೇಷ ಕ್ಷೀರಾಭಿಷೇಕ, ವಿಶೇಷ ಪಂಚಾಮೃತ, ಹಯಗ್ರೀವ ನೈವೇದ್ಯ ಮತ್ತಿತರ ವಿಶೇಷ ಸೇವೆಗಳು ನಡೆದವು. ಮೂರೂ ದಿನಗಳ‌ ಕಾಲ ಈ ವಿಶೇಷ ಸೇವೆಗಳನ್ನು ಭಕ್ತರು ಕೈಗೊಳ್ಳಬಹುದಾಗಿದೆ.

ಇದನ್ನೂ ಓದಿ : ಆಗಸ್ಟ್‌ ೨೦ರಂದು ವಿವಿಧೆಡೆ ಅಡಿಕೆ ಧಾರಣೆ

ನಾಳೆ ಆ.೨೧ರಂದು ಬೆಳಿಗ್ಗೆ ೭.೩೦ಕ್ಕೆ ದೇವತಾ ಪ್ರಾರ್ಥನೆ, ನಂತರ ಭಕ್ತಾದಿಗಳ ಹಸ್ತದಿಂದ ಶ್ರೀ ಗುರು ಸಾರ್ವಭೌಮರ ಪಾದ್ಯಪೂಜೆ ನಡೆಯುವುದು. ಬೆಳಿಗ್ಗೆ ೯ಕ್ಕೆ ವಿಶೇಷ ಪಂಚಾಮೃತ ಅಭಿಷೇಕ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅಖಂಡ ಭಜನೆ ಪ್ರಾರಂಭ ಆಗಲಿದೆ. ೧ರಿಂದ ೩ರವರೆಗೆ ಮಹಾಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೮ಕ್ಕೆ ರಥೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ ಜರುಗುವುದು.

ಈ ಸುದ್ದಿಯ ವಿಡಿಯೋ ಯೂಟ್ಯೂಬ್ ಚಾನೆಲ್ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಂನಲ್ಲಿ ವೀಕ್ಷಿಸಬಹುದು.