ಸಿದ್ದಾಪುರ (Siddapur) : ಅಡಿಕೆ (Arecanut) ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿತರನ್ನು (Arrest of thieves) ಬಂಧಿಸುವಲ್ಲಿ ಸಿದ್ದಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಬ್ಬರೂ ಸಿದ್ದಾಪುರ ತಾಲೂಕಿನವರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಿಳಗಿ ಹೊಸಮಂಜು ನಿವಾಸಿ ಅತ್ತಿರ ರಜಾ ಅಲಿಯಾಸ್ ನೂಮಾನ್ ರಫಿಕ್ ಸಾಬ್(೨೦) ಮತ್ತು ಇಟಗಿ ಆಲದಕಟ್ಟೆ ನಿವಾಸಿ ಇಮ್ರಾನ್ ಶೇಖ್ ಹುಸೇನಸಾಬ್ (೨೪) ಬಂಧಿತರು. ಇವರಿಂದ ೧.೪೦ ಲಕ್ಷ ರೂ. ಮೌಲ್ಯದ ೪ ಕ್ಷಿಂಟಲ್ ಚಾಲಿ ಅಡಿಕೆ ಮತ್ತು ಕಳ್ಳತನಕ್ಕೆ ಬಳಸಿದ್ದ ಎಸ್ಟೀಮ್ ಕಾರು (Esteem Car) ಮತ್ತು ಹಿರೋ ಸ್ಪ್ಲೆಂಡರ್ (Hero splender) ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಸಿ ವಾಕ್ ಬಳಿ ಸಿಲುಕಿದ ಬೋಟ್
ಸೆ.೯ರಂದು ಬೆಳಗಿನ ಜಾವ ೨ರ ಸುಮಾರಿಗೆ ಇಟಗಿಯಲ್ಲಿ ಕಳ್ಳತನ ನಡೆದಿತ್ತು. ಸ್ಪ್ಲೆಂಡರ್ ಮೋಟರ್ ಸೈಕಲ್ಲಿನಲ್ಲಿ ಬಂದ ಅಪರಿಚಿತರು ತಲಾ ೬೦ ಕೆ.ಜಿ. ತೂಕದ ೪ ಚಾಲಿ ಅಡಿಕೆ ಚೀಲವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಅಡಿಕೆ ವ್ಯಾಪಾರಿ ಮಹಮ್ಮದ್ ಶಫಿ ಅಬ್ದುಲ್ ಅಜೀಂ ಸಾಬ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು(Case registered).
ಇದನ್ನೂ ಓದಿ : ಬೈಕಿನಲ್ಲಿ ಬಂದು ಅಡಿಕೆ ಕದ್ದೊಯ್ದರು
ಪ್ರಕರಣ ದಾಖಲಿಸಿಕೊಂಡ ಸಿದ್ದಾಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿ, ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ (Arrest of thieves). ಪೊಲೀಸ್ ಅಧೀಕ್ಷಕ ಎಂ.ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ.ಜಯಕುಮಾರ, ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ ತನಿಖೆ ನಡೆದಿತ್ತು. ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾನೆ ಪೊಲೀಸ್ ನಿರೀಕ್ಷಕ ಕುಮಾರ ಕೆ., ಉಪ ನಿರೀಕ್ಷಕರಾದ ಅನೀಲ ಬಿ.ಎಂ., ಗೀತಾ ಶಿರ್ಶಿಕರ ಮತ್ತು ಸಿಬ್ಬಂದಿ ಎಆರ್‌ಎಸ್‌ಐ ಶುಕೂರು, ರಮೇಶ ಕೂಡಲ್, ದೇವರಾಜ ಟಿ. ನಾಯ್ಕ, ಮೋಹನ ಗಾವಡಿ, ಸುನೀಲ ಜಂಗಲಿ, ರಾಮಾ ಕುದ್ರಗಿ, ಮಣಿಕಂಠ, ಪರಶುರಾಮ ಸುಣಗಾರ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಸತ್ತ ಹುಂಜ ವಶಕ್ಕೆ ಪಡೆದ ಪೊಲೀಸರು !