ಭಟ್ಕಳ: ಟ್ಯಾಕ್ಸಿ ಚಾಲಕರಿಂದ ಆಟೋ ರಿಕ್ಷಾ ಚಾಲಕರ ಮೇಲೆ ವಿನಾಕಾರಣ ದೌರ್ಜನ್ಯ ಮತ್ತು ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿ, ಭಟ್ಕಳ ಆಟೋರಿಕ್ಷಾ ಚಾಲಕ–ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶನಿವಾರ ನಗರ ಪೊಲೀಸ್ ಠಾಣೆಗೆ ಮನವಿ (appeal) ಸಲ್ಲಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ನಗರ ಪೊಲೀಸ್ ಠಾಣೆಗೆ ತೆರಳಿ ಪಿಐ ದಿವಾಕರ್ ಪಿ ಎಂ ಅವರಿಗೆ ಮನವಿ (appeal) ನೀಡಿದ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಹಾಗೂ ಇತರರು, ಕಳೆದ ಒಂದು ವರ್ಷದಿಂದ ಕೆಲ ಟ್ಯಾಕ್ಸಿ ಚಾಲಕರು ಬಾಡಿಗೆಗೆ ತೆರಳುವ ಆಟೋಗಳನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಇಳಿಸುವಂತೆ ಒತ್ತಾಯಿಸುವುದು, ಚಾಲಕರಿಂದ ಹಣ ಕಸಿದುಕೊಳ್ಳುವುದು ಹಾಗೂ ಈ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದಾಗಿ ದೂರಿದರು.

Shivaratri/ ತಂತ್ರಜ್ಞಾನದ ಮೊರೆ ಹೋದ ಮುರುಡೇಶ್ವರ ಪೊಲೀಸರು

ರಾಜ್ಯದಲ್ಲಿ ಎಂಟು ಲಕ್ಷಕ್ಕೂ ಅಧಿಕ ಆಟೋ ರಿಕ್ಷಾಗಳಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಸುಮಾರು ೭ ಸಾವಿರ ಹಾಗೂ ಭಟ್ಕಳದಲ್ಲಿ ೧೬೦೦ಕ್ಕೂ ಹೆಚ್ಚು ಆಟೋ ರಿಕ್ಷಾಗಳಿವೆ. ಬಾಡಿಗೆ ಆಧಾರಿತ ಜೀವನ ನಡೆಸುತ್ತಿರುವ ಆಟೋ ಚಾಲಕರಿಗೆ ಈ ರೀತಿಯ ಕಿರುಕುಳದಿಂದ ಆತಂಕ ಸೃಷ್ಟಿಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

Pratibha karanji/ ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಕುಂಟವಾಣಿ ಶಾಲೆಯ ಶ್ರೀಕರ ಹೆಬ್ಬಾರ ಧಾರ್ಮಿಕ ಪಠಣದಲ್ಲಿ ಪ್ರಥಮ

ಫೆ ೧೨ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳ ಸಭೆಯಲ್ಲಿ ಆಟೋ ಚಾಲಕರ ಸಮಸ್ಯೆಗಳ ಕುರಿತು ಚರ್ಚೆ ನಡೆದಿದ್ದು, ಅದರಲ್ಲಿ ಟ್ಯಾಕ್ಸಿ ಸಂಘದವರೂ ಭಾಗವಹಿಸಿದ್ದರು. ಆದರೂ ಕಿರುಕುಳ ನಿಲ್ಲದಿರುವುದು ವಿಷಾದನೀಯ ಎಂದು ಸಂಘದವರು ತಿಳಿಸಿದ್ದಾರೆ.

competition/ ಆದರ್ಶ ದಂಪತಿಗಳು ಸ್ಪರ್ಧೆ ಸಂಪನ್ನ 

ಏಕಾಏಕಿ ವಾಹನಗಳನ್ನು ಅಡ್ಡಗಟ್ಟುವ ಘಟನೆಗಳಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಯಾವುದೇ ಕಾನೂನು ಆಧಾರವಿಲ್ಲದೆ ಈ ರೀತಿಯ ಕ್ರಮ ಕೈಗೊಳ್ಳುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇನ್ನು ಮುಂದೆ ಜಿಲ್ಲೆಯ ಯಾವುದೇ ಆಟೋ ಚಾಲಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

cross country/ ಸುಧೀಂದ್ರ ಕಾಲೇಜಿನ ಆಶಿತಾ ನಾಯ್ಕ ಗುಡ್ಡಗಾಡು ಓಟದಲ್ಲಿ ಯುನಿವರ್ಸಿಟಿ ಬ್ಲೂ 

ಮನವಿ ಸ್ವೀಕರಿಸಿದ ಪಿಐ ದಿವಾಕರ್ ಪಿ ಎಂ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ‌ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ/ಮಾಲಕರ ಕ್ಷೇಮಾಭಿವೃದ್ಧಿ ಸಂಘದ ವಿಶ್ವನಾಥ ಗೌಡ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಸಲೀಂ ಮಹ್ಮದ್, ಭಟ್ಕಳ ತಾಲೂಕು ಅಧ್ಯಕ್ಷ ವೆಂಕಟೇಶ ನಾಯ್ಕ, ಮುರುಡೇಶ್ವರ (Murudeshwar) ಭಾಗದ ಅಧ್ಯಕ್ಷ ಶ್ರೀಧರ ನಾಯ್ಕ ಸೇರಿದಂತೆ ನೂರಾರು ಆಟೋ ಚಾಲಕರು ಉಪಸ್ಥಿತರಿದ್ದರು.

Biker injured/ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ