ಭಟ್ಕಳ (Bhatkal) : ಮುರುಡೇಶ್ವರ (Murdeshwar) ಕಡಲ ತೀರದಲ್ಲಿ ನಿನ್ನೆ ಮಂಗಳವಾರ ಅವಘಡ (Beach Tragedy) ಸಂಭವಿಸಿದ ಹಿನ್ನೆಲೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮತ್ತು ಎಸ್ಪಿ ಎಂ. ನಾರಾಯಣ ಮುರ್ಡೇಶ್ವರದಲ್ಲಿಯೇ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆರ್.ಎನ್.ಎಸ್. ಆಸ್ಪತ್ರೆಗೆ (RNS Hospital) ಭೇಟಿ ನೀಡಿದ ಉಭಯ ಅಧಿಕಾರಿಗಳು ಬಾಲಕಿಯರ ಆರೋಗ್ಯ ವಿಚಾರಿಸಿದರು. ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಕೂಡ ಆರ್.ಎನ್.ಎಸ್. ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ್ದಾರೆ. ಮುರ್ಡೇಶ್ವರ ಠಾಣೆಗೆ ಭೇಟಿ ನೀಡಿದ ಎಸ್ಪಿ ನಾರಾಯಣ ವಿದ್ಯಾರ್ಥಿನಿಯರನ್ನು ರಕ್ಷಿಸಿದ ಲೈಫ್ ಗಾರ್ಡ್ ಮತ್ತು ಕೆಎನ್ಡಿ ಸಿಬ್ಬಂದಿ ಯೋಗೇಶ, ಶೇಖರ ಮತ್ತು ಗಿರೀಶ ಅವರನ್ನು ಅಭಿನಂದಿಸಿದರು.
ಇದನ್ನೂ ಓದಿ : ನೀರಲ್ಲಿ ಮುಳುಗಿ ಓರ್ವ ವಿದ್ಯಾರ್ಥಿನಿ ಸಾವು, ಮೂವರು ನಾಪತ್ತೆ
ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ಕೋತೂರಿನ (Kothur) ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವತಿಯಿಂದ ಮಕ್ಕಳು ಮುರ್ಡೇಶ್ವರಕ್ಕೆ (Murudeshwar) ಪ್ರವಾಸಕ್ಕೆ ಬಂದಿದ್ದರು. ೨೭ ಗಂಡುಮಕ್ಕಳು, ೪೬ ಹೆಣ್ಣು ಮಕ್ಕಳು ಇಬ್ಬರು ಮಹಿಳಾ ಶಿಕ್ಷಕಿಯರು ಮತ್ತು ನಾಲ್ವರು ಶಿಕ್ಷಕರು ಪ್ರಾಂಶುಪಾಲೆ ಶಶಿಕಲಾ ನೇತೃತ್ವದಲ್ಲಿ ಖಾಸಗಿ ಬಸ್ಸಿನಲ್ಲಿ ಪ್ರವಾಸಕ್ಕೆ ಬಂದಿದ್ದರು. ಕಡಲ ತೀರದಲ್ಲಿ ಆಟ ಆಡುತ್ತಿರುವಾಗ ಅವಘಡ (Beach Tragedy) ಸಂಭವಿಸಿತ್ತು. ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರೂ ವಿದ್ಯಾರ್ಥಿನಿಯರ ಆರೋಗ್ಯ ಸುಧಾರಿಸಿದೆ. ಕಾಣೆಯಾಗಿರುವ ಇನ್ನೂ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕರಾವಳಿ ಕಾವಲು ಪಡೆ (CSP) ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು (Fishermen) ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ : ದೇವರನ್ನೇ ಬಿಡದ ಕುಖ್ಯಾತ ಆರೋಪಿತರು ಕಂಬಿ ಹಿಂದೆ