ಬೆಳಗಾವಿ (Belagavi) : ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮೂವರಿಗೆ ಚೂರಿ ಇರಿದ ಘಟನೆ ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗಣಪತಿ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವ ವೇಳೆ ಕಾಲು ತಾಗಿದ್ದಕ್ಕೆ ಕಿರಿಕ್ ನಡೆದಿದೆ. ಈ ಸಂದರ್ಭ ಮೂವರು ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ. ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳು ಚಾಕು ಇರಿತಕ್ಕೊಳಗಾದವರು. ಪ್ರವೀಣ್ ಗುಂಡ್ಯಾಗೋಳ ಎಂಬಾತನಿಗೆ ಗಂಭೀರ ಗಾಯವಾಗಿದೆ. ಈತನಿಗೆ ಬೆಳಗಾವಿಯ (Belagavi) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದರ್ಶನ್ ಪಾಟೀಲ ಮತ್ತು ಸತೀಶ ಪೂಜಾರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಹೊಟ್ಟೆ, ಬೆನ್ನು, ಕತ್ತು ಭಾಗಕ್ಕೆ ಚೂರಿ ಇರಿದು ಯುವಕರ ಗ್ಯಾಂಗ್ ಪರಾರಿಯಾಗಿದೆ. ಆರೋಪಿಗಳು ಚರ್ಚ್ ಗಲ್ಲಿಯ ಯುವಕರು ಎನ್ನಲಾಗುತ್ತಿದೆ.  ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : ಮಾಗೋಡು, ಉಪ್ಪೋಣಿಯಲ್ಲಿ ವಿದ್ಯುತ್ ವ್ಯತ್ಯಯ