ಭಟ್ಕಳ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಹಕಾರಿ ಧುರೀಣ (cooperative leader), ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಈರಪ್ಪ ಗರ್ಡಿಕರ್ ಅವರಿಗೆ ಅವರದೇ ಅಧ್ಯಕ್ಷತೆಯ ಎಂ ಜಿ ಎಂ ಸಹಕಾರಿ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದಂಪತಿ ಸಹಿತ ಸನ್ಮಾನಿಸಿ ಗೌರವಿಸಲಾಯಿತು (felicitation).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಈರಪ್ಪ ಗರ್ಡಿಕರ್ ಅವರು ತೀರಾ ಸಾಮಾನ್ಯ ಕುಟುಂಬದಿಂದ ಬಂದು ಹಂತಹoತವಾಗಿ ವ್ಯವಹಾರ, ಸಹಕಾರಿ ಕ್ಷೇತ್ರದಲ್ಲಿ ಎತ್ತರಕ್ಕೆ ಏರಿದವರು (cooperative leader). ಎಷ್ಟೇ ಎತ್ತರಕ್ಕೆ ಏರಿದರೂ ಸರಳತೆ ಮತ್ತು ಸೌಜನ್ಯತೆ ಉಳಿಸಿ ಬೆಳೆಸಿಕೊಂಡು ಬಂದವರು. ತನ್ನ ಮಿತಿಯಲ್ಲಿ ಸದ್ದಿಲ್ಲದೇ ಸಾಮಾಜಿಕ ಸೇವಾ ಕಾರ್ಯ ಮಾಡುತ್ತಾ ಬಂದವರು. ದುರ್ಬಲರಿಗೆ ಏನಾದರೂ ಯಾರೇ ಒಳ್ಳೆಯ ಕಾರ್ಯವನ್ನು ಮಾಡಲು ಮುಂದಾದರೂ ಕೈಜೋಡಿಸುವ ಸಹೃದಯಿ. ಅವರ ಸಾಮಾಜಿಕ ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಪರಿಗಣಿಸಿ ಇಂದು ಅವರ ಸಹಕಾರಿ ಕ್ಷೇತ್ರದ ಸಾಧನೆಗೆ ಅವರದೇ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಗೌರವ ಸನ್ಮಾನ ನೀಡಲಾಗುತ್ತಿದೆ ಎಂದು ನುಡಿದರು.

ಇದನ್ನು ಓದಿ: ration rice/ ಪಡಿತರ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಈ ಸಂದರ್ಭದಲ್ಲಿ ಎಂ ಜಿ ಎಂ ಸಂಸ್ಥೆಯ ಉಪಾಧ್ಯಕ್ಷ ಎಂ ಜಿ ಅರುಣಕುಮಾರ, ಸಂಸ್ಥೆಯ ನಿರ್ದೇಶಕರಾದ ಸುರೇಶ ನಾಯ್ಕ, ಮಂಜುನಾಥ ನಾಯ್ಕ ಜಗದೀಶ ನಾಯ್ಕ, ನವನೀತ್ ಗರ್ಡಿಕರ್, ಉದಯ ನಾಯ್ಕ, ಮಂಜುನಾಥ ನಾಯ್ಕ, ನಿವೃತ್ತ ಶಿಕ್ಷಕ ಎಂ ಕೆ ನಾಯ್ಕ, ಬ್ಯಾಂಕಿನ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇದನ್ನು ಓದಿ: seriously injured/ ರಸ್ತೆ ದಾಟುತ್ತಿದ್ದ ವೃದ್ಧಗೆ ಶಾಲಾ ವಾಹನ ಡಿಕ್ಕಿ, ಗಂಭೀರ