ಭಟ್ಕಳ ಡೈರಿ ವರದಿ
ಭಟ್ಕಳ: ಮಾರುಕೇರಿ ಸಮೀಪದ ಮರಂಬಳ್ಳಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿ-೫೦ರಲ್ಲಿ ಬೈಕ್ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರ ಗಾಯಗೊಂಡ ಘಟನೆ ವರದಿಯಾಗಿದೆ.
ನವೆಂಬರ್ ೧೦ರಂದು ಸಂಜೆ ಸುಮಾರು ೩:೪೫ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಹಾಡುವಳ್ಳಿ ಕಡೆಯಿಂದ ಭಟ್ಕಳದತ್ತ ಬರುತ್ತಿದ್ದ ಬೈಕ್ ಅನ್ನು ಸಂಜಯ ರಾಮ ನಾಯ್ಕ ಎಂಬವರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಮೋಟಾರು ಸೈಕಲ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದಿದೆ. ಇದರಿಂದ ಬೈಕ್ನಲ್ಲಿದ್ದ ಹಿಂಬದಿ ಸವಾರ ನಾರಾಯಣ ಕಂಚಿಗುಂಡಿ ನಾಯ್ಕ ಅವರಿಗೆ ಗಾಯಗಳಾಗಿವೆ.
ಗಾಯಾಳುವಿನ ಬಲಗೈ ಭುಜ, ತಲೆ ಹಾಗೂ ಗದ್ದದ ಸಮೀಪ ಗಾಯಗಳಾಗಿದ್ದು, ಅವು ಸಾದಾ ಸ್ವರೂಪದ್ದಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಗಾಯಾಳು ನಾರಾಯಣ ಅವರು ನವೆಂಬರ್ ೧೫ರಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಶಿಕ್ಷಣ ಕ್ಷೇತ್ರಕ್ಕೆ ಭಟ್ಕಳದ ಕೊಂಕಣ ಖಾರ್ವಿ ಸಮಾಜದ ಬೆಂಬಲದ ಹಸ್ತ, ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಹೂಡಿಕೆ
ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಕೆಪಿಎಸ್ ತೆರ್ನಮಕ್ಕಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ


