ಭಟ್ಕಳ ಡೈರಿ ವರದಿ
ಭಟ್ಕಳ: ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭಟ್ಕಳ ತಾಲೂಕಿನ ಕೆಪಿಎಸ್ ತೆರ್ನಮಕ್ಕಿ ಶಾಲೆಯ ನಿಧಿ ಶ್ರೀಧರ ನಾಯ್ಕ ಮತ್ತು ಮಾನ್ವಿ ಕುಮಾರ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ.
ನವೆಂಬರ್ ೧೪ರಂದು ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನ ರಂಗಾಯಣದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಸನ್ನಿಧಿ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಶ್ರೀಕಾಂತ ಕುಮಟಾ ಅವರ ರಚನೆ ಮತ್ತು ನಿರ್ದೇಶನದ ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ‘ಜಲವೇ ಜಗದ ಉಸಿರು’ ನಾಟಕವನ್ನು ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಉತ್ತಮ ಅಭಿನಯಕ್ಕಾಗಿ ನಿಧಿ ಮತ್ತು ಮಾನ್ವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದ್ದು, ತಂಡಕ್ಕೆ ಸಮಾಧಾನಕರ ಪ್ರಶಸ್ತಿಯೂ ದೊರೆತಿದೆ.
ನಾಟಕದಲ್ಲಿ ಅಮೂಲ್ಯ ಆರ್. ನಾಯ್ಕ, ಮಾನ್ವಿ ಕುಮಾರ ಗೌಡ, ಸೌಜನ್ಯ ಎಸ್. ನಾಯ್ಕ, ಸಹನಾ ವಿ. ನಾಯ್ಕ, ನಿಧಿ ಎಸ್. ನಾಯ್ಕ, ದಿಶಾಂತ ದುರ್ಗ ಹರಿಕಾಂತ, ಭರತ ಎಂ. ಬಾಕಡ, ಮನೋಹರ ಎಂ. ನಾಯ್ಕ, ವಿಶಾಂತ ದುರ್ಗ ಹರಿಕಾಂತ ಹಾಗೂ ತೇಜಸ್ ವಿ. ನಾಯ್ಕ ಅಭಿನಯಿಸಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಉಪಪ್ರಾಂಶುಪಾಲರು, ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಕೆಪಿಎಸ್ ತೆರ್ನಮಕ್ಕಿ ಜಿಲ್ಲಾ ಮಟ್ಟದಲ್ಲಿ ಪ್ರಥಮ


