ಭಟ್ಕಳ (Bhatkal) : ನಗರದ ಹೃದಯ ಭಾಗದಲ್ಲಿರುವ ವನದುರ್ಗಾದೇವಿಯ (ಬಂಡಿ ಬಕ್ಕ) ಸನ್ನಿಧಿಯಲ್ಲಿ ಜ.೧೪ ಮಂಗಳವಾರ ಮಕರ ಸಂಕ್ರಾಂತಿಯ (Makar Sankranti) ದಿನದಂದು ವನದುರ್ಗಾ ದೇವಿಯ ಹಬ್ಬ ಆಚರಿಸಲಾಗುತ್ತಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಭಟ್ಕಳದ (Bhatkal) ಅರ್ಬನ್ ಬ್ಯಾಂಕ್ ಪ್ರಧಾನ ಕಚೇರಿಯ ಮುಂಭಾಗದಲ್ಲಿ ಈ ವನದುರ್ಗಾ ದೇವಿ ಸನ್ನಿಧಿಯಿದೆ. ಅಂದು ಸಂಜೆ ೬ ಗಂಟೆಗೆ ಭಜನಾ ಕಾರ್ಯಕ್ರಮ, ಸಂಜೆ ೭ ಗಂಟೆಗೆ ಮಂಗಳಾರತಿ ನಡೆಯಲಿದೆ. ಸಂಜೆ ಸಮಯದಲ್ಲಿ ವನದುರ್ಗಾ ದೇವಿಯ ಒಳವಲಯ ಹಾಗೂ ಹೊರವಲಯದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಿ, ಭಟ್ಕಳದ ಹಿಂದೂ ಭಾಂದವರ ರಕ್ಷಣೆಗಾಗಿ, ವನದುರ್ಗಾ ತಾಯಿಯಲ್ಲಿ ಶರಣೆಂದು ಪ್ರಾರ್ಥನೆ ಮಾಡಿಕೊಳ್ಳುವುದು ಎಂದು ಶ್ರೀ ವನದುರ್ಗಾ ದೇವಿ ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಉ.ಕ. ಜಿಲ್ಲೆಯಲ್ಲಿ ಹೆಣ್ಣು ಮಗು ಮಾರಾಟದ ಮತ್ತೊಂದು ಪ್ರಕರಣ