ಭಟ್ಕಳ (Bhatkal): ಇಲ್ಲಿನ ವಾಕರಸಾ ಸಂಸ್ಥೆಯ (NWKRTC) ಬಸ್‌ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿಟ್ಟಿದ್ದ ಬೈಕ್‌ ಕಳುವಾಗಿದೆ. ತಾಲೂಕಿನ ಹೆಬ್ಳೆಯ ಹೆರ್ತಾರ ಗ್ರಾಮದ ಗೌಂಡನಮನೆ ನಿವಾಸಿ ತಿರುಮಲ ಮಂಜುನಾಥ ಮೊಗೇರ (೨೭) ಬೈಕ್‌ ಕಳಕೊಂಡವರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇವರು ಅ.೩೦ರಂದು ಬೆಳಿಗ್ಗೆ ೮.೨೦ರ ಸುಮಾರಿಗೆ ಭಟ್ಕಳ (Bhatkal) ಬಸ್‌ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಹಿರೋ ಹೊಂಡಾ ಸ್ಪ್ಲೆಂಡರ್‌ ಬೈಕ್‌ ನಿಲ್ಲಿಸಿಟ್ಟಿದ್ದರು. ರಾತ್ರಿ ೧೦.೨೦ರ ಸುಮಾರಿಗೆ ಮರಳಿ ಬಂದಾಗ ಸ್ಥಳದಲ್ಲಿ ಬೈಕ್‌ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನಿನ್ನೆ ನ.೧ರಂದು ಸಂಜೆ ೬.೧೫ರ ಸುಮಾರಿಗೆ ಭಟ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಪರದಾಡಿದ ಕೊಂಕಣ ರೈಲ್ವೆ ಪ್ರಯಾಣಿಕರು