ಭಟ್ಕಳ (Bhatkal) : ನವೆಂಬರ್ ೧ರಂದು ಭಟ್ಕಳ ತಾಲೂಕು ಆಡಳಿತದಿಂದ ನಡೆಸಿದ ಕನ್ನಡ ರಾಜ್ಯೋತ್ಸವ (Kannada Rajyotsava) ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಖಾಜಿಯಾ ಅಪ್ಸ್ ಹುಜೇಪಾ ಭುವನೇಶ್ವರಿ (Bhuvaneshwari) ದೇವಿಗೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿದ್ದನ್ನು ಭುವನೇಶ್ವರಿ ಕನ್ನಡ ಸಂಘ ತೀವ್ರವಾಗಿ ಖಂಡಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಕುರಿತು ಸಂಘದ ಅಧ್ಯಕ್ಷ ಅಣ್ಣಪ್ಪ ಎಸ್. ನಾಯ್ಕ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ. ಪುಷ್ಪ ನಮನ ಸಲ್ಲಿಸಲು ನಿರಾಕರಿಸಿದ್ದು ಭುವನೇಶ್ವರಿ (Bhuvaneshwari) ದೇವಿಗೆ ಹಾಗೂ ೬.೫ ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ. ಕೇವಲ ತಮ್ಮ ಧರ್ಮವನ್ನು ಪ್ರೀತಿಸುವವರು ಯಾಕೆ ಜನಪ್ರತಿನಿಧಿಯಾಗಬೇಕು? ಅಷ್ಟೊಂದು ಧರ್ಮಾಭಿಮಾನ ಇದ್ದವರು ಮನೆಯಲ್ಲೇ ಕುಳಿತುಕೊಳ್ಳಬೇಕು. ಕೂಡಲೇ ಅವರು ತಮ್ಮ ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ :   ಹಿಂಬದಿಯಿಂದ ಡಿಕ್ಕಿ ಹೊಡೆದ ಆಟೋ ರಿಕ್ಷಾ

ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಖಾಜಿಯಾ ಅಪ್ಸ್ ಹುಜೇಪಾ ವರ್ತನೆ ಬಗ್ಗೆ ಪ ವಿಭಾಗ ಅಧಿಕಾರಿಗೆ ದೂರು ಕೊಡಲಿದ್ದೇವೆ. ಒಂದು ವೇಳೆ ರಾಜೀನಾಮೆ ಕೊಟ್ಟಿಲ್ಲವೆಂದರೆ ನಮ್ಮ ಶ್ರೀ ಭುವನೇಶ್ವರಿ ಕನ್ನಡ ಸಂಘ ಹಾಗೂ ಭಟ್ಕಳದ ತಾಲೂಕಿನ ಎಲ್ಲಾ ಕನ್ನಡಿಗರ ಬೆಂಬಲಗೊಂದಿಗೆ ಜಾಲಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದು ಭುವನೇಶ್ವರಿ ಕನ್ನಡ ಸಂಘ  ಅಧ್ಯಕ್ಷ ಅಣ್ಣಪ್ಪ ನಾಯ್ಕ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ :  ಬಸ್‌ ನಿಲ್ದಾಣ ಪಾರ್ಕಿಂಗ್‌ ಸ್ಥಳದಲ್ಲಿದ್ದ ಬೈಕ್‌ ಕಳವು