ಭಟ್ಕಳ: ತಾಲೂಕಿನ ಮುರುಡೇಶ್ವರದ ಹರಿಜನಕೇರಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ ಎಂ ನಾಯಕ ಇವರ ಸೇವಾ ನಿವೃತ್ತಿ ಸಮಾರಂಭ ಕಾರ್ಯಕ್ರಮ (Farewell) ಎಸ್.ಡಿ.ಎಂ.ಸಿ ಹಾಗೂ ಊರ ನಾಗರಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಜನಕೇರಿ ಮುರ್ಡೇಶ್ವರದಲ್ಲಿ ೨೦೧೧ ರಿಂದ ೨೦೧೬ರವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮದ (Farewell) ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ನಾಯ್ಕ ವಹಿಸಿದ್ದು. ಉದ್ಘಾಟಕರಾಗಿ ಮಾಜಿ ಗ್ರಾ.ಪಂ ಅಧ್ಯಕ್ಷ ಕುಮಾರ ನಾಯ್ಕ ರು ಹಾಗೂ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಕಾರ್ಯದರ್ಶಿ ರಫೀಕ್, ಜನತಾ ಕಾಲೋನಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್ ಆರ್ ಮೇಸ್ತ, ಹ್ಯುಮನ್ ವೆಲ್ಪೇರ್ ನ ಮೀರ್ ಅಲಿ, ಶೇಖ್ ಹೈದರ್, .ಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಲಕ್ಷ್ಮಿ ಬಾಕಡ, ಜೈ ಶ್ರೀರಾಮ ನವಯುವ ಚೈತನ್ಯ ಸಂಘದ ಮುಖಂಡರು, ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಹಲವಾರು ಸಂಘ ಸಂಸ್ಥೆಗಳು ಈ ಕಾರ್ಯಕ್ರಮದ ಯಶಸ್ವಿಯಲ್ಲಿ ಭಾಗವಹಿಸಿದ್ದಲ್ಲದೆ ಜಗನ್ನಾಥ ಎಂ ನಾಯಕ ಇವರ ಸೇವಾ ನಿವೃತ್ತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಇದನ್ನು ಓದಿ: Tribute/ ಎಲ್ ಎಸ್ ನಾಯ್ಕರ ಶ್ರದ್ಧಾಂಜಲಿ ಸಭೆ
ಈ ವೇಳೆ ಎಸ್.ಡಿ.ಎಂ.ಸಿ ಹಾಗೂ ಊರ ನಾಗರಿಕರರಿಂದ ಜಗನ್ನಾಥ ಎಂ ನಾಯಕ ದಂಪತಿಗೆ ಸನ್ಮಾನಿಸಿ ಗೌರವಿಸಿದರು. ಶಾಲೆಯ ಸಹ ಶಿಕ್ಷಕಿ ವನಿತಾ ಪಿ ಭಟ್ ಸ್ವಾಗತಿಸಿದರು. ಅಕ್ಷತಾ ವಿಠ್ಠಲ ನಾಯ್ಕ ವಂದಿಸಿದರು. ಅತಿಥಿ ಶಿಕ್ಷಕರಾದ ಸುಜಾತ ನಾಯ್ಕ ಹಾಗೂ ಯಶೋಧ ಶುಭಕೋರಿದರು. ಸಹ ಶಿಕ್ಷಕರಾದ ಸಂತೋಷ ಕುಮಾರ ಹಾಗೂ ಓಂಕಾರ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಇದನ್ನು ಓದಿ: bike accident/ ಬೈಕ್ ಅಪಘಾತದಲ್ಲಿ ಒಬ್ಬ ಸಾವು



