ಭಟ್ಕಳ (Bhatkal): ಬೈಕೊಂದು ಅಪಘಾತ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿ ನೀರು ಹರಿದು ಹೋಗಲು ಐ ಆರ್ ಬಿ (IRB infrastructure) ತೆಗೆದ ಹೊಂಡಕ್ಕೆ ಬಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ (Bike Accident). ಈ ಘಟನೆ ಶಂಸುದ್ದಿನ್ ಸರ್ಕಲ್ ಸಮೀಪ ಸತ್ಕಾರ ಹೋಟೆಲ್ ಮುಂಭಾಗದಲ್ಲಿ ನಡೆದಿದ್ದು, ಹೋಟೆಲ್ ನ ಸಿಸಿಟಿವಿಯಲ್ಲಿ (cctv) ಸೆರೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಒಂದು ವಾರದ ಹಿಂದಷ್ಟೆ ಮಳೆ ನೀರು ಹರಿದು ಹೋಗಲು ಹೆದ್ದಾರಿ ಪಕ್ಕದಲ್ಲಿದ್ದ ಹಳೆಯ ರಾಜ ಕಾಲುವೆಯೊಂದನ್ನು ಬಿಡಿಸಿ ಹೊಂಡ ತೆಗೆದಿದ್ದರು. ಆದರೆ ಇದರಿಂದಾಗಿ ಯಾವುದೇ ಪ್ರಯೋಜನವಾಗಿರಲಿಲ್ಲ. ಮಳೆ ಬಂದ ವೇಳೆ ಯಥಾಪ್ರಕಾರ ಸರ್ಕಲ್ ನಲ್ಲಿ ನೀರು ತುಂಬಿ ಹೊಳೆಯಂತಾಗಿತ್ತು.

ವಿಡಿಯೋ ಸಹಿತ ಇದನ್ನು ಓದಿ : cochin shipyard/ ಕಡಲ ತೀರದಲ್ಲಿ ಬಾರ್ಜ್‌ ಪ್ರತ್ಯಕ್ಷ

ರಸ್ತೆ ಅಗಲೀಕರಣ ಮಾಡುವ ವೇಳೆ ರಸ್ತೆಯ ೨ ಬದಿಗಳಲ್ಲಿ ಚರಂಡಿ ಮಾಡದೆ ಇರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ. ನೀರು ಹರಿದು ಹಗಲು ರಾಜಕಾಲುವೆ ತೆಗೆದು ಬಳಿಕ ಪೈಪ್ ಹಾಕಿ ಹೊಂಡ ಮುಚ್ಚದೆ ಹಾಗೆ ಬಿಟ್ಟಿದ್ದಾರೆ. ಅದರಿಂದಾಗಿ ಗುರುವಾರ ಮಧ್ಯಾಹ್ನ ೨ ಬೈಕ್ ನಡುವೆ ನಡೆಯುತ್ತಿದ್ದ ಅಪಘಾತ (bike Accident) ತಪ್ಪಿಸಲು ಹೋಗಿ ಓರ್ವ ಬೈಕ್ ಸವಾರ ನಿಯಂತ್ರಣ ತಪ್ಪಿ ನೇರ ಹೊಂಡಕ್ಕೆ ಬಿದ್ದಿದ್ದಾರೆ.

ಇದನ್ನು ಓದಿ : Plantation/ ಮನೆಗೊಂದು ಗಿಡ ಅಭಿಯಾನ ಯಶಸ್ವಿ 

ಹೆದ್ದಾರಿಯ ಪಕ್ಕದಲ್ಲಿ ತೆಗೆದ ಹೊಂಡದಿಂದ ಪ್ರಯೋಜನವಿಲ್ಲದಿದ್ದರು ಕೂಡ ಹೊಂಡ ಮುಚ್ಚದೆ ಹಾಗೆ ತೆರೆದಿರುವುದರಿಂದ ಇನ್ನಷ್ಟು ಅಪಘಾತ ಸಂಭವಿಸುವ ಮೊದಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಐ ಆರ್ ಬಿ ಕಂಪನಿ ಹಾಗೂ ತಾಲೂಕಾಡಳಿತ ಗಮನವಹಿಸಬೇಕಿದೆ.

ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋವನ್ನು  ಇನ್ಸ್ಟಾಗ್ರಾಂಫೇಸ್‌ಬುಕ್‌ ಮತ್ತು ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು.