ಭಟ್ಕಳ: ನಾಯಿ ಅಡ್ಡ ಬಂದು ಬೈಕ್ ಸ್ಕಿಡ್ (Bike skid) ಆಗಿ ಮಹಿಳೆ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ಬೆಳಕೆಯ ಸೋಡಿಗದ್ದೆ ಕ್ರಾಸ್ ನಿವಾಸಿ ವಾಸು ತಂದೆ ನಾರಾಯಾಣ ನಾಯ್ಕ (೩೯) ದೀಪಾ ನಾಗೇಶ ನಾಯ್ಕ ಎಂಬುವರನ್ನು ಕೂಡ್ರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದರು. ಜ ೧೮ರ ಮಧ್ಯರಾತ್ರಿ ೧೨:೩೦ ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ದಾಟಿ ಕಟಗೇರಿ ರಸ್ತೆಯ ಮೂಲಕ ಕಟಗೇರಿ ಮನೆಯ ಕಡೆಗೆ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹೋಗುತ್ತಿರುವಾಗ ಬೆಳಕೆ ಹೈಸ್ಕೂಲ ಗ್ರೌಂಡ ಹತ್ತಿರ ಆಕಸ್ಮಿಕವಾಗಿ ನಾಯಿಯೊಂದು ಅಡ್ಡ  ಬಂದಿದೆ. ಅದನ್ನು ತಪ್ಪಿಸಲು ಹೋಗಿ ಮೋಟಾರು ಸೈಕಲ ಸ್ಕೀಡ್ (Bike skid) ಆಗಿ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ  ಬಿದ್ದಿದ್ದಾರೆ. ಹಿಂಬದಿ ಸವಾರರಾದ ದೀಪಾ ಗಂಡ ನಾಗೇಶ ನಾಯ್ಕ ಇವರಿಗೆ ತಲೆ, ಎಡಕೈ ಹಾಗೂ ಎಡಗಾಲಿಗೆ ಗಾಯಗಳಾಗಿವೆ. ಈ ಕುರಿತು ಬೆಳಕೆ ಕಟಗೇರಿ ವಾಸಿ ಮಂಜುನಾಥ ತಂದೆ ಈರಪ್ಪ ನಾಯ್ಕ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case filed).

ವಿಡಿಯೋ ಸಹಿತ ಇದನ್ನು ಓದಿ: Murdeshwar Jathre/ ಅದ್ದೂರಿಯಾಗಿ ನಡೆದ ಮುರ್ಡೇಶ್ವರ ಜಾತ್ರೆ