ಕಾರವಾರ: ಕೈಗಾ (Kaiga) ಅಣು ಘಟಕದಿಂದ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ತಾಲೂಕಿನ ವಿರ್ಜೆ ಬಳಿ ಶುಕ್ರವಾರ ನಸುಕಿನ ವೇಳೆ ಹೊತ್ತಿ ಉರಿದಿದೆ (Bus in fire). ಅಗ್ನಿ ಅವಘಡದ ವೇಳೆ ಬಸ್ಸಿನಲ್ಲಿ ಚಾಲಕ ಸೇರಿ ಮೂರು ಜನ ಮಾತ್ರ ಇದ್ದರು. ಹೊಗೆ ಕಾಣಿಸಿಕೊಂಡ ಕೂಡಲೇ ಅವರೆಲ್ಲರೂ ಬಸ್ಸಿನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗುರುವಾರ ರಾತ್ರಿ ಕೈಗಾ ಅಣು ವಿದ್ಯುತ್ ಘಟಕದಲ್ಲಿ ತಂಗಿದ್ದ ಬಸ್ಸು ಶುಕ್ರವಾರ ಬೆಳಗ್ಗೆ ಉದ್ಯೋಗಿಗಳನ್ನು ಕರೆತರಲು ಟೌನ್‌ಶಿಪ್ ಕಡೆ ಹೊರಟಿತ್ತು. ಬೆಳಗ್ಗೆ ೫.೧೦ರ ವೇಳೆಗೆ ಬಸ್ಸು ವಿರ್ಜೆ ತಲುಪಿತ್ತು. ಆಗ ಬಸ್ಸಿನಿಂದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದು, ಬಸ್ಸಿನಿಂದ ಇಳಿದು ತಪಾಸಣೆ ನಡೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಇಡೀ ಬಸ್ಸು ಅಗ್ನಿಗೆ ಆಹುತಿಯಾಯಿತು (Bus in fire).
ಇದನ್ನೂ ಓದಿ : ಕಾರವಾರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ
ತಕ್ಷಣ ಬಸ್ಸಿನಲ್ಲಿದ್ದವರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರೊಳಗೆ ಬಸ್ಸು ಭಾಗಶಃ ಸುಟ್ಟು ಕರಕಲಾಗಿತ್ತು. ಅದಾಗಿಯೂ ಅಗ್ನಿಶಾಮಕ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿ ಆರಿಸಿದರು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಬಸ್ಸಿಗೆ ಬೆಂಕಿ ಹತ್ತಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಸತೀಶ ಸೈಲ್ ಮೇಲ್ಮನವಿ/ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್