ಸಿದ್ದಾಪುರ (Siddapur) :  ತಾಲೂಕಿನ ಹೆಜಿನಿ ಹತ್ತಿರ ಇಕೋ ವಾಹನ ಅಪಘಾತಕ್ಕೀಡಾಗಿ (Car Accident) ಭಟ್ಕಳದ (Bhatkal) ಚಿತ್ರಕಲಾ ಶಿಕ್ಷಕ (Drawing teacher) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಬೈಲೂರು ಶಾಲೆಯ ಶಿಕ್ಷಕ ಮಂಜುನಾಥ ಅಣ್ಣಪ್ಪ ದೇವಾಡಿಗ ಮೃತರು. ಕಾರಿನಲ್ಲಿದ್ದ ಉಳಿದ ಐದು ಜನ ಶಿಕ್ಷಕರು ಗಾಯಗೊಂಡಿದ್ದು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಬೇರೆ ಕಡೆ ಸ್ಥಳಾಂತರಿಸಲಾಗುತ್ತಿದೆ. ಸಂದೇಶ ಶೆಟ್ಟಿ, ನಾರಾಯಣ ಮೊಗೇರ, ಚನ್ನವಿರಪ್ಪ ಹೊಸಮನಿ, ಸಾದಿಕ್‌ ಶೇಖ ಹಾಗೂ ಮಹೇಶ ನಾಯ್ಕ ಗಾಯಗೊಂಡಿದ್ದಾರೆ.  ಇವರೆಲ್ಲರೂ ದಾವಣಗೆರೆಗೆ (Davanagere) ಚಿತ್ರಕಲಾ ಗ್ರೇಡ್‌ ಪರೀಕ್ಷೆಯ ಮೌಲ್ಯಮಾಪನಕ್ಕೆಂದು ಇಕೋ ಕಾರಿನಲ್ಲಿ ತೆರಳುತ್ತಿದ್ದರು. ಹೊನ್ನಾವರದಿಂದ (Honnavar) ಮಾವಿನಗುಂಡಿ ಮಾರ್ಗವಾಗಿ ಬುಧವಾರ ಮಧ್ಯಾಹ್ನ ಆರು ಶಿಕ್ಷಕರು ದಾವಣಗೆರೆಗೆ ಹೊರಟಿದ್ದರು. ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಕಾರು ರಸ್ತೆ ಪಕ್ಕದ ಹೊಂಡಕ್ಕೆ ಉರುಳಿ ಬಿದ್ದಿದೆ (Car Accident) ಎಂದು ತಿಳಿದುಬಂದಿದೆ. ಸಿದ್ದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :  ಶಿಕ್ಷಕರ ವಿರುದ್ಧ ಪ್ರಕರಣ; ಮುರ್ಡೇಶ್ವರ ಬೀಚ್‌ ಬಂದ್‌