ಭಟ್ಕಳ: ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ಪಲ್ಟಿ ಹೊಡೆದು (Car skid) ಪುಟ್ಟ ಮಗು ಸಹಿತ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತೆಂಗಿನಗುಂಡಿ ಕ್ರಾಸ್ ನಿವಾಸಿ ಮಹ್ಮದ್ ಮದನಿ ಶೇಖ್ (೩೧) ಕಾರು ಚಲಾಯಿಸುತ್ತಿದ್ದರು. ಇವರು ದಿನಾಂಕ ೧೬/೦೨/೨೦೨೬ ರಂದು ಮಧ್ಯರಾತ್ರಿ ೧-೩೦ ಗಂಟೆಯ ಸಮಯಕ್ಕೆ ಕಾರನ್ನು ಮಂಗಳೂರು (Mangaluru) ಕಡೆಯಿಂದ ಭಟ್ಕಳಕ್ಕೆ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾರೆ. ಗುಳ್ಮಿ ಕ್ರಾಸ್ ಶೆಟ್ಟಿ ಗ್ಯಾರೇಜ್ ಹತ್ತಿರ ತಲುಪುತ್ತಿದ್ದಂತೆ ಕಾರು ಪಲ್ಟಿಯಾಗಿ (Car skid) ಕಾರಿನಲ್ಲಿದ್ದ ಅವರ ಹೆಂಡತಿ ಫಾತೀಮಾ ಸುಹಾ (೨೬) ಎಡಗಾಲಿಗೆ ಮತ್ತು ಸೊಂಟದ ಭಾಗಕ್ಕೆ ಮತ್ತು ಮೂರುವರೆ ವರ್ಷದ ಮಗಳು ಆಯಿಷಾ ಶಮಾ ಗಾಯಗೊಂಡಿದ್ದಾರೆ. ಅಲ್ಲದೆ ಸ್ವತಹ ಕಾರು ಚಲಾಯಿಸುತ್ತಿದ್ದ ಮಹ್ಮದ್ ಮದನಿ ಶೇಖ್ ತಲೆಯ ಭಾಗಕ್ಕೆ, ಮುಖಕ್ಕೆ, ಕೈಗೆ ಮತ್ತು ಎದೆಯ ಭಾಗಕ್ಕೆ ಗಾಯಗಳಾಗಿವೆ. ಈ ಕುರಿತು ತೆಂಗಿನ ಗುಂಡಿ ಕ್ರಾಸ್ ನಿವಾಸಿ ಮಕ್ಸೂದ್ ಅಹ್ಮದ್ ಶೇಖ್ ದೂರು ದಾಖಲಿಸಿದ್ದಾರೆ.

Makkala Santhe/ ಗಂಡು ಮಕ್ಕಳ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ಸಂತೆ