ಕುಮಟಾ (Kumta): ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಕೋಣ ಮತ್ತು ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ (cattle trafficking) ಕಂಟೇನರವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ (container seizure).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕುಮಟಾದ ಪೊಲೀಸ್ ಠಾಣೆಯ ಸಂಚಾರ ವಿಭಾಗದ ಪಿಎಸ್‌ಐ ರವಿ ಗುಡ್ಡಿ ವಶಪಡಿಸಿಕೊಂಡು ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಮಂಜುನಾಥ ಗೌಡ ಅವರು ನಾಲ್ವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : Teacher Arrest/ ೬ ತಿಂಗಳಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ

ಕಂಟೇನರ್‌ವೊಂದರಲ್ಲಿ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ (cattle trafficking) ಎಂಬ ಮಾಹಿತಿ ಸಂಚಾರ ವಿಭಾಗ ಪಿಎಸ್‌ಐ ರವಿ ಗುಡ್ಡಿ ಅವರಿಗೆ ಬಂದಿತ್ತು. ಅವರು ತಮ್ಮ ಸಿಬ್ಬಂದಿಯೊಂದಿಗೆ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭದಲ್ಲಿ ಸರಕು ಸಾಗಾಣಿಕೆಯ ಕಂಟೇನರವೊಂದರಲ್ಲಿ ಹಿಂಸಾತ್ಮಕವಾಗಿ ೨೬ ಎಮ್ಮೆ ಹಾಗೂ ೧ ಕೋಣ ಸೇರಿದಂತೆ ಒಟ್ಟೂ ೨೭ ಜಾನುವಾರುಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ತಕ್ಷಣ ಈ ವಾಹನ ಹಾಗೂ ಈ ವಾಹದಲ್ಲಿದ್ದವರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಮಂಜುನಾಥ ಗೌಡ ಅವರಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ :  ಸೆಪ್ಟೆಂಬರ್‌ ೧೪ರಂದು ಸೊರಬದಲ್ಲಿ ಅಡಿಕೆ ಧಾರಣೆ

ಈ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ವಾಹನದಲ್ಲಿದ್ದ ಮೈಸೂರಿನ (Mysuru) ಅಯೂಬ್‌ ಅಹಮ್ಮದ್, ಕಂಟೇನರ್ ಚಾಲಕ ಕೇರಳದ (Kerala) ಕಾಸರಗೋಡಿನ (Kasaragod) ಅಬುಬಕರ್ ಮಹಮ್ಮದ ಚಳಕಾರ, ಹಾಸನದ (Hassan) ಅಸ್ಗರ್ ಹುಸೇನ್ ಮತ್ತು ಕಾಸರಗೋಡಿನ ಅಬ್ದುಲ್ ರಹಿಮಾನ್ ಅವರನ್ನು ಬಂಧಿಸಲಾಗಿದೆ. ಕಂಟೇನರ್ ವಾಹನದ ಮಾಲೀಕ ದಾವಣಗೆರೆಯ (Davanagere) ಚಮನ್ ಮಹಮ್ಮದ ಹನೀಫ್ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).

ಇದನ್ನೂ ಓದಿ : Communal harmony/ ಎಲ್ಲ ಧರ್ಮದವರು ಒಟ್ಟಾಗಿ ಪೂಜಿಸುವ ಗಣೇಶ !