ಭಟ್ಕಳ: ಇಲ್ಲಿನ ಮೂಡಶಿರಾಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (government school) ಶ್ರೀ ಶಾರದಾ ಪೂಜೆ, ನೂತನವಾಗಿ ನಿರ್ಮಿಸಲಾದ ಪ್ಲೇ ಪಾರ್ಕ್ ಉದ್ಘಾಟನೆ ಹಾಗೂ ವರುಷದ ಹರುಷ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ವೇಳೆ ನೂತನವಾಗಿ ನಿರ್ಮಿಸಲಾದ ಪ್ಲೇ ಪಾರ್ಕ್ ಉದ್ಘಾಟಿಸಿದ ಭಟ್ಕಳ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು (government school) ಸುಸಜ್ಜಿತವಾಗುತ್ತಿದ್ದು, ಕಲಿಕೆ ಮತ್ತು ಸೌಲಭ್ಯಗಳ ವಿಚಾರದಲ್ಲಿ ಇವು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟರು.

Liquor ban/ ಭಟ್ಕಳದಲ್ಲಿ ಮದ್ಯ ನಿಷೇಧ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯ್ಕ, ಶಾಲೆಯ ವಿನೂತನ ಮಾದರಿಯ ಕಟ್ಟಡವಾದ ‘ವಿದ್ಯಾವಾಹಿನಿ ಎಕ್ಸ್‌ಪ್ರೆಸ್’ ಗೆ ಹಸಿರು ನಿಶಾನೆ ತೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ ನಾಯ್ಕ ವಹಿಸಿದ್ದರು.

Police parade/ ಹಿಂದೂ ಸಮಾಜೋತ್ಸವ ಹಿನ್ನೆಲೆ ಭಟ್ಕಳದಲ್ಲಿ ಪೊಲೀಸ್ ಪರೇಡ್

ರಾಜ್ಯಮಟ್ಟದ ‘ಪುಷ್ಠಿ ಯೋಜನೆ’ ಅಡಿಯಲ್ಲಿ ‘ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಈ ಶಾಲೆ ಆಯ್ಕೆಯಾಗಿದ್ದು, ಇದರ ಜೊತೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮನೋಜ ಶೆಟ್ಟಿ ಅವರು ರಾ ಪ್ರಾ ಶಾ ಶಿಕ್ಷಕರ ಸಂಘದ ವತಿಯಿಂದ ನೀಡಲಾದ ಪ್ರತಿಷ್ಠಿತ ಜ್ಯೋತಿಬಾ ಫುಲೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯ ಈ ಮಹೋನ್ನತ ಸಾಧನೆಗೆ ಕಾರಣರಾದ ಶಾಲಾ ಶಿಕ್ಷಕರಾದ ಮನೋಜ್ ಶೆಟ್ಟಿ ಹಾಗೂ ಸವಿತಾ ಹೆರವಟ್ಟ ಇವರನ್ನು ಎಸ್‌ಡಿಎಂಸಿ ಸದಸ್ಯರು ಹಾಗೂ ಊರ ನಾಗರಿಕರು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.

bike rally/ ‘ನಗರ ಹಿಂದೂ ಸಂಗಮ’ ಅಂಗವಾಗಿ ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ವರುಷದ ಹರುಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಕಾಯ್ಕಿಣಿ ವಹಿಸಿದ್ದರು. ಈ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಸಮಸ್ತ ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆಯಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿತು.

arrested/ ಹೆದ್ದಾರಿಯಲ್ಲಿ ದರೋಡೆ ಸಂಚು: ಹುರುಳಿಸಾಲ ಯುವಕನ ಬಂಧನ

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ರತ್ನಾ ನಾಗಪ್ಪ ನಾಯ್ಕ, ನಿಕಟಪೂರ್ವ ಗ್ರಾಮ ಪಂಚಾಯತ ಸದಸ್ಯೆ ಹಾಗೂ ಪ್ಲೇ ಪಾರ್ಕ್ ನಿರ್ಮಿಸಲು ಸಹಕರಿಸಿದ ದಾನಿಗಳಾದ ಮೇಘನಾ ಕಾಮತ ಹಾಗೂ ತಿಮ್ಮಪ್ಪ ನಾಯ್ಕ, ನಿಕಟಪೂರ್ವ ಗ್ರಾ ಪಂ ಸದಸ್ಯ ರಾಮಚಂದ್ರ ನಾಯ್ಕ, ಬಿಆರ್ಸಿ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ, ದೈಹಿಕ ಪರಿವೀಕ್ಷಕ ಪ್ರಕಾಶ ಶಿರಾಲಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಮ್ ಎನ್ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಉಲ್ಲಾಸ ನಾಯ್ಕ, ಬೆಂಗ್ರೆ ಪಂಚಾಯತ ಪಿಡಿಓ ರಮೇಶ ನಾಯ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮನೋಜ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿ ಸವಿತಾ ಹೆರವಟ್ಟ ವಂದಿಸಿದರು.

Draft notification/ ಭಟ್ಕಳ ನಗರಸಭೆಗೆ ವಾರ್ಡ್ ವಿಂಗಡಣೆ: ಕರಡು ಅಧಿಸೂಚನೆ ಪ್ರಕಟ