ಭಟ್ಕಳ: ಪ್ರವಾಸಿಗರಿಗೆ ಕೊಠಡಿ ಕಾಯ್ದಿರಿಸುವಿಕೆ  ವಿಷಯದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ತಡರಾತ್ರಿ ಪ್ರವಾಸಿ ತಾಣ ಮುರುಡೇಶ್ವರದಲ್ಲಿ (Murudeshwar) ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಇಲ್ಲಿನ ಕೈಕಿಣಿ ಗ್ರಾ ಪಂ ತೆರ್ನಮಕ್ಕಿ ಸಬ್ಬತ್ತಿ ನಿವಾಸಿ ರಾಜೇಶ ಮಂಜಪ್ಪ ನಾಯ್ಕ ಹಾಗೂ ಭಟ್ಕಳದ (Bhatkal)ಮಿಥುನ್ ನಾಯ್ಕ ಎಂದು ಗುರುತಿಸಲಾಗಿದೆ. ಹೊಡೆದಾಟದಲ್ಲಿ ಮಚ್ಚು, ಚೂರಿಯಂತಹ ಮಾರಕಾಸ್ತಗಳು ಬಳಕೆಯಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case filed) ಮುರುಡೇಶ್ವರ (Murudeshwar) ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Vehicle seized/ ಪರವಾನಗಿಯಿಲ್ಲದೇ ಮರಳು ಸಾಗಾಟ: ವಾಹನ ವಶಕ್ಕೆ

ರಾಜೇಶ ನಾಯ್ಕ ನೀಡಿದ ದೂರಿನಲ್ಲಿ ಮುರುಡೇಶ್ವರದ (Murudeshwar) ವೆಂಕಟೇಶ ನಾರಾಯಣ ನಾಯ್ಕ, ಜಯಂತ ನಾರಾಯಣ ನಾಯ್ಕ, ಶೇಖರ ನಾಯ್ಕ, ಭಟ್ಕಳದ ಮಿಥುನ್ ನಾಯ್ಕ, ಅಭಿಷೇಕ ಮೊಗೇರ ಆರೋಪಿಗಳು ಎಂದು ಹೆಸರಿಸಲಾಗಿದೆ. ಮುರುಡೇಶ್ವರ ಕನ್ನಡ ಶಾಲೆ ನಿವಾಸಿ ಶೇಖರ ಮಂಜುನಾಥ ನಾಯ್ಕ ನೀಡಿದ ದೂರಿನಲ್ಲಿ ಮುರುಡೇಶ್ವರ (Murdeshwar) ಚಂದ್ರಹಿತುವಿನ ರಾಜು ಮಾದೇವ ನಾಯ್ಕ, ಭಾಸ್ಕರ ಮಾದೇವ ನಾಯ್ಕ, ಕೇಶವ ಮಾದೇವ ನಾಯ್ಕ, ಸುಂದರ ನಾಯ್ಕ, ವಸಂತ ಮಾದೇವ ನಾಯ್ಕ, ಹೆಬಳೆ ಗಾಂಧಿನಗರದ ಜಗದೀಶ ವಾಸು ಮೊಗೇರ, ಮಾವಳ್ಳಿ ಕನ್ನಡ ಶಾಲೆಯ ಗಣೇಶ ಜಯಂತ ನಾಯ್ಕ, ಬೈಲೂರಿನ ಗಣೇಶ ಬಾಬು ನಾಯ್ಕ, ಭಟ್ಕಳ ಬೆಳ್ಳಿಯ ವಿನೋದ ನಾಯ್ಕ, ತೆರ್ನಮಕ್ಕಿಯ ಶಿವರಾಜ ನಾಗರಾಜ ನಾಯ್ಕ, ಸೋನಾರಕೇರಿಯ ರೋಹಿತ ಅಶೋಕ ಮೊಗವೀರ, ಭಟ್ರಹಿತುವಿನ ವಿಜಯ ಪಟಗಾರ, ಗರಡಿಗದ್ದೆಯ ಪ್ರಶಾಂತ ನಾಗೇಶ ನಾಯ್ಕ ಆರೋಪಿಗಳೆಂದು ಹೆಸರಿಸಲಾಗಿದೆ.

ಇದನ್ನೂ ಓದಿ: taxi drivers/ ಟ್ಯಾಕ್ಸಿ ಚಾಲಕರಿಗೆ ಅನಾವಶ್ಯಕ ದಂಡ: ಡಿವೈಎಸ್ಪಿ ಗೆ ದೂರು