ಭಟ್ಕಳ: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟಾಟಾ ಈಚರ್ ವಾಹನದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದ್ದು, ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ (Vehicle seized).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ (Honnavar) ತಾಲೂಕಿನ ಮಂಕಿ ಗ್ರಾಮದ ನಿವಾಸಿ ಭಾಸ್ಕರ ದತ್ತಾ ನಾಯ್ಕ ಅವರು ಯಾವುದೇ ಪರವಾನಿಗೆ ಇಲ್ಲದೆ ಮರಳು ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿ ಶಾರದಾ ಹೊಳೆ ದೇವಸ್ಥಾನದ ಬಳಿ ಸಾಗಿಸುತ್ತಿದ್ದ ವೇಳೆ ಪೊಲೀಸರು ತಡೆದು ವಾಹನವನ್ನು ವಶಪಡಿಸಿಕೊಂಡಿದ್ದಾರೆ (Vehicle seized). ಸ್ವಂತ ಲಾಭಕ್ಕಾಗಿ ನಡೆಸುತ್ತಿದ್ದ ಈ ಅಕ್ರಮ ಮರಳು ಸಾಗಾಟದ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಪಿಎಸೈ ಭರಮಪ್ಪ ಬೆಳಗಲಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: taxi drivers/ ಟ್ಯಾಕ್ಸಿ ಚಾಲಕರಿಗೆ ಅನಾವಶ್ಯಕ ದಂಡ: ಡಿವೈಎಸ್ಪಿ ಗೆ ದೂರು