ಭಟ್ಕಳ (Bhatkal): ತಾಲೂಕಿನ ಜಾಲಿಯ ಜಾಲಿಕೋಡಿ ಬೀಚ್ ನಲ್ಲಿ ದೊಡ್ಡ ಹಡಗುಗಳಿಂದ ಸರಕು ಸಾಗಾಣಿಕೆ ಮಾಡಲು ಬಳಸುವ ಕೊಚ್ಚಿನ್‌ ಶಿಪ್‌ಯಾರ್ಡ್‌ (Cochin shipyard) ಕಂಪನಿಯ ಕ್ಯಾರಿಯರ್ ಶಿಪ್ (ಬಾರ್ಜ್‌) ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಂಗಳವಾರ ಬೆಳಗಿನ ಜಾವ ೧ ಗಂಟೆಯ ಸಮಯಕ್ಕೆ ಭಟ್ಕಳ ತಾಲೂಕಿನ ಜಾಲಿಯ ಜಾಲಿಕೋಡಿ ಬೀಚ್ ನಲ್ಲಿ ಈ ಬಾರ್ಜ್‌ ಪತ್ತೆಯಾಗಿದೆ. ದೂಡ್ಡ ಹಡುಗಳಿಂದ ಬಂದ ಸರಕುಗಳನ್ನು ಬಂದರುಗಳಿಗೆ ಸಾಗಾಣಿಕೆ ಮಾಡಲು ಬಳಸುವ ಬಾರ್ಜ್‌ (barge) ಇದಾಗಿದೆ. ಕೇರಳದ ಕರಾವಳಿಯಲ್ಲಿ ಹಾಗೂ ಕರ್ನಾಟಕದ ಕರಾವಳಿಯ ಭಾಗದಲ್ಲಿ ಭಾರಿ ಗಾಳಿ ಮಳೆಯಾಗಿದೆ. ಈ ಸಂದರ್ಭದಲ್ಲಿ ಹಡಗಿಗೆ ಹಾಕಿದ ಲಂಗೂರ ಕಟ್ಟಾಗಿ ಗಾಳಿಯಲ್ಲಿ ತೇಲಿ ಬಂದ ಸಾಧ್ಯತೆ ಇದೆ. ಸ್ಥಳಕ್ಕೆ ಭಟ್ಕಳ ಕರಾವಳಿ ಕಾವಲುಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸದ್ಯ ಕೊಚ್ಚಿನ್‌ ಶಿಪ್‌ಯಾರ್ಡ್‌ (Cochin shipyard) ಕಂಪನಿಯ ಈ ಬಾರ್ಜ್‌ ಭಟ್ಕಳ ಕರಾವಳಿ ಕಾವಲು ಪಡೆಯ ವಶದಲ್ಲಿದೆ.

ಇದನ್ನೂ ಓದಿ : Plantation/ ಮನೆಗೊಂದು ಗಿಡ ಅಭಿಯಾನ ಯಶಸ್ವಿ 

“ಗಾಳಿ, ಮಳೆಗೆ ಸಮುದ್ರದಲ್ಲಿ ನೀರಿನ ಒತ್ತಡ, ಕಡಲಿನಲ್ಲಿ ದೊಡ್ಡ ಅಲೆಗಳು ಇರುವುದರಿಂದ. ಬಾರ್ಜನ್ನು ಬೇರೊಂದು ಬೋಟ್ ಕಟ್ಟಿಕ್ಕೊಂಡು ಹೋಗುವಾಗ ರೋಪ್ ಅಥವಾ ಚೈನ್ ಕಟ್ಟಾಗಿರುತ್ತದೆ. ಯಂತ್ರಗಳು ಕೆಲವು ಬಾರ್ಜನಲ್ಲಿ ಇರುತ್ತವೆ. ಕೆಲವು ಬಾರ್ಜಗಳಲ್ಲಿ ಇರುವುದಿಲ್ಲ. ರೋಪ್‌ ಅಥವಾ ಚೈನ್ ಕಟ್ಟಾದಾಗ ಯಂತ್ರಗಳು ಇರದಿದ್ದಲ್ಲಿ, ಬಾರ್ಜನಲ್ಲಿ ಚಾಲಕ ಅಥವಾ ಕೆಲಸ ಮಾಡುವವರು ಇರುವುದಿಲ್ಲವಾದರಿಂದ ಕಡಲ ತೀರಕ್ಕೆ ಬಾರ್ಜ್‌ ಬಂದಿರಬಹುದು. – ಶಿವಾನಂದ ಮೊಗೇರ, ಕಡಲಕವಿ, ಕರಿಕಲ್‌, ಭಟ್ಕಳ.

ಇದನ್ನೂ ಓದಿ : house theft/ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

ಬಾರ್ಜ್‌ ಹೇಗಿದೆ ಗೊತ್ತಾ?: ಇದರ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.