ಶಿರಸಿ (Sirsi) : ಪ್ರೀತಿಸಿ ಮದುವೆಯಾಗಿ ಬೇರೆ ಮನೆಮಾಡಿದ್ದ ಮಗ ಹಾಸಿಗೆ ಹಿಡಿದಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ವಿಷ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರಸಿ ತಾಲೂಕಿನ ಯಡಳ್ಳಿಯ ದಿಗೋಪ್ಪ ಗ್ರಾಮದ ರಾಮಾ ಗಣಪತಿ ಬಡಗಿ (೬೫) ಮೃತರು. ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಇವರ ಮಗ ಬಾಲಚಂದ್ರ ಪ್ರೀತಿಸಿ ಮದುವೆಯಾಗಿ ತಂದೆ-ತಾಯಿಯನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದರು. ಅಲ್ಲದೆ ಮಗನಿಗೆ ಕೆಲವು ವರ್ಷಗಳ ಹಿಂದೆ ಪಾರ್ಶವಾಯು ಆಗಿ ಹಾಸಿಗೆ ಹಿಡಿದಿದ್ದ. ಇದನ್ನು ಮನಸ್ಸಿಗೆ ಹಚ್ಚಿಕೊಂಡ ರಾಮಾ ಬಡಗಿ ಅ.೧೩ರ ಬೆಳಿಗ್ಗೆ ೧೧ರಿಂದ ಅ.೧೪ರ ಬೆಳಿಗ್ಗೆ ೭ ಗಂಟೆಯ ನಡುವಿನ ಅವಧಿಯಲ್ಲಿ ವಿಷ ಸೇವಿಸಿದ್ದರು.

ಇದನ್ನೂ ಓದಿ :  ಇಬ್ಬರು ನಾಪತ್ತೆ; ಪ್ರತ್ಯೇಕ ಪ್ರಕರಣ ದಾಖಲು

ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ  ಯಾವುದೋ ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾದ ಇವರನ್ನು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ (Hubballi) ಕಿಮ್ಸ್‌ ಆಸ್ಪತ್ರೆಗೆ (KIMS Hospital) ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಯಾವುದೇ ಚೇತರಿಕೆ ಆಗದೇ ಇರುವದರಿಂದ ಕುಟುಂಬದವರು ಮನೆಗೆ ಕರೆದುಕೊಂಡು ಬರಲು ತಿರ್ಮಾನಿಸಿದ್ದರು.

ಇದನ್ನೂ ಓದಿ : ಅಕ್ಟೋಬರ್‌ ೧೮ರಂದು ವಿವಿಧೆಡೆ ಅಡಿಕೆ ಧಾರಣೆ

ಅ. ೧೮ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಶಿರಸಿಗೆ ಕರೆದುಕೊಂಡು ಬರುತ್ತಿದ್ದಾಗ, ಉಸಿರಾಟದಲ್ಲಿ ತುಂಬಾ ತೊಂದರೆ ಕಾಣಿಸಿಕೊಂಡಿತ್ತು. ಈ ವೇಳೆ ಚಿಕಿತ್ಸೆಗಾಗಿ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಮೃತರ ಪತ್ನಿ ಸವಿತಾ ರಾಮಾ ಬಡಗಿ ಶಿರಸಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಜಾನುವಾರು ಮೈ ತೊಳೆಯಲು ಹೋದವ ನೀರುಪಾಲು