ಭಟ್ಕಳ (Bhatkal)  : ಆಸ್ತಿ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವಗೆ ಮನೆಯನ್ನೇ ಬ್ಲಾಸ್ಟ್‌ ಮಾಡಿ ಇಡೀ ಕುಟುಂಬವನ್ನು ನಾಶಮಾಡುವುದಾಗಿ ಬೆದರಿಕೆಯೊಡ್ಡಿರುವ ಬಗ್ಗೆ ಭಟ್ಕಳ (Bhatkal) ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (Complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಸುಲ್ತಾನ್‌ ಸ್ಟ್ರೀಟ್‌ ನ ಆಯಿಷಾ ಪ್ಲಾಜಾ ಎದುರಿನ ಖಮಿ ಹೌಸ್‌ ನಿವಾಸಿ ಮಹ್ಮದ್‌ ಫೈಜಾನ್‌ ಮಹ್ಮದ್‌ ಅಶ್ರಫ್‌ ಖಮಿ (೪೧) ಎಂಬುವವರಿಗೆ ಬೆದರಿಕೆಯೊಡ್ಡಲಾಗಿದೆ. ಈ ಕುರಿತು ಅವರು ತನ್ನ ತಾಯಿ, ಸಹೋದರ ಮತ್ತು ಸಹೋದರಿ ವಿರುದ್ಧ ದೂರು ದಾಖಲಿಸಿದ್ದಾರೆ. ಫಾತಿಮಾ ಕೌಸರ್‌ ಮಹ್ಮದ್‌ ಅಶ್ರಫ್‌ ಖಮಿ (೬೦), ಮಹ್ಮದ್‌ ರಯ್ಯಾನ್‌ ಮಹ್ಮದ್‌ ಅಶ್ರಫ್‌ ಖಮಿ (೩೦) ಮತ್ತು ಮುಗ್ದಂ ಕಾಲೋನಿ ನಶೆಮನ್‌ ಸ್ಟ್ರೀಟ್‌ ನಿವಾಸಿ  ಖತೀಜಾ ಇಝಾ ಮಹ್ಮದ್‌ ಅಶ್ರಫ್‌ ಖಮಿ (೨೨) ಆರೋಪಿತರು.

ಇದನ್ನೂ ಓದಿ : crane collision/ ಕ್ರೇನ್‌ ಡಿಕ್ಕಿಯಾಗಿ ಪಾದಚಾರಿ ಸಾವು

ಮಾ.೫ರಂದು ಮಹ್ಮದ್‌ ಫೈಜಾನ್‌ ತನ್ನ ಸ್ನೇಹಿತನೊಂದಿಗೆ ಹೋಗುತ್ತಿದ್ದಾಗ ಮನೆಯೆದುರು ಅಡ್ಡಗಟ್ಟಿದ ಆರೋಪಿತರು, ಮನೆ ಮತ್ತು ಜಾಗವನ್ನು ನಿನಗೆ ಕೊಡುವುದಿಲ್ಲ ಮತ್ತು ಜಾಗ ಮತ್ತು ಮನೆಯ ಬಗ್ಗೆ ಮಾತನಾಡಿದರೆ ನಿನ್ನ ಮತ್ತು ನಿನ್ನ ಕುಟುಂಬವನ್ನು ಕೊಂದು ಬಿಸಾಕುತ್ತೇವೆ ಅಂತಾ ಜೇವದ ಬೆದರಿಗೆ ಹಾಕಿದ್ದಾರೆ. ಆರೋಪಿ ಮಹ್ಮದ್‌ ರಯ್ಯಾನ್‌  ಇಡೀ ಮನೆಯನ್ನೇ ಬ್ಲಾಸ್ಟ್ ಮಾಡಿ ಕುಟುಂಬವನ್ನೇ ನಾಶ ಗೊಳಿಸುವುದಾಗಿ ಜೀವ ಬೆದರಿಕೆ ಹಾಕಿ ಬೈಕಿನಿಂದ ಡಿಕ್ಕಿ ಪಡಿಸಲು ಯತ್ನಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Imprisonment/ ಗಾಂಜಾ ನಂಟಿನ ಇಬ್ಬರಿಗೆ ಕಠಿಣ ಜೈಲು ಶಿಕ್ಷೆ