ಭಟ್ಕಳ: ಬಸ್ಸಿನಿಂದ ಇಳಿಯುತ್ತಿದ್ದಾಗ ಬಿದ್ದು ಮಹಿಳೆ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಕುರಿತು ಗಾಯಾಳು ಪುತ್ರಿ, ಬೇಂಗ್ರೆ ಯಕ್ಷಿಮನೆ ಬಸಟ್ಟಿಹಕ್ಲ ನಿವಾಸಿ ಶಶಿಕಲಾ ಗಂಡ ಮಂಜುನಾಥ ದೇವಾಡಿಗ (೪೦) ದೂರು (Complaint) ದಾಖಲಿಸಿದ್ದಾರೆ. ಬೇಂಗ್ರೆ ಉಳ್ಮಣ್ ಶಶಿಹಿತ್ಲು ನಿವಾಸಿ ನಾಗಮ್ಮ ಗಂಡ ವೆಂಕಟ್ರಮಣ ದೇವಾಡಿಗ (೬೦) ಗಾಯಗೊಂಡವರು.

ವಿಡಿಯೋ ಸಹಿತ ಇದನ್ನು ಓದಿ: Shedabari/ ಶೇಡಬರಿ ಜಾತ್ರೆಗೆ ಚಾಲನೆ

ತಾಯಿ ಮತ್ತು ಮಗಳು ಸೇರಿ ಸಾಯಂಕಾಲ ೪ ಗಂಟೆ ಸಮಯಕ್ಕೆ ಮನೆಯಿಂದ ಆಸ್ಪತ್ರೆಯ ಸಲುವಾಗಿ ಮುರ್ಡೇಶ್ವರದ ಬಸ್ತಿಗೆ ಬಂದಿದ್ದರು. ಅಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಸಾಯಂಕಾಲ ಮನೆಗೆ ಹೋಗುವ ಸಲುವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿದ್ದರು. ರಾಷ್ಟ್ರೀಯ ಹೆದ್ದಾರಿ-೬೬ರ ಮುಖಾಂತರ ಬಸ್ತಿಯಿಂದ ಶಿರಾಲಿ ಕಡೆಗೆ ಹೋಗುತ್ತಿರುವಾಗ ಸಂಜೆ ೬ ಗಂಟೆ ಸಮಯಕ್ಕೆ ಮಾವಿನಕಟ್ಟ ಹತ್ತಿರ ಬಸ್ ಚಾಲಕನು ಬಸ್ ನಿಲ್ಲಿಸಿದ್ದ.

ಇದನ್ನು ಓದಿ: Bhatkal/ ರಾಗಿ ಗಂಜಿಯಲ್ಲಿ ಇಲಿಪಾಷಾಣ ಸೇರಿಸಿ ಕುಡಿದ!

ಅದರಲ್ಲಿದ್ದ ಪ್ರಯಾಣಿಕರು ಇಳಿಯುತ್ತಿರುವಾಗ ಪಿರ್ಯಾದಿಯ ತಾಯಿ ನಾಗಮ್ಮ ಇಳಿಯುವ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ನಿಲ್ಲಿಸಿದ ಬಸ್ಸನ್ನು ಒಮ್ಮೇಲೆ ಚಲಾಯಿಸಿದ್ದರಿಂದ ಬಸ್‌ನಿಂದ ಇಳಿಯುತ್ತಿದ್ದ ನಾಗಮ್ಮ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದರು. ಇದರಿಂದ ಅವರ ಬಲಭುಜಕ್ಕೆ ಒಳನೋವು ಮತ್ತು ಬಲ ಕಣ್ಣಿಗೆ ತೆರಚಿದ ಗಾಯವಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ವಿಜಯನಗರ (Vijayanagara) ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಕಲ್ಲಹಳ್ಳಿ ತಾಂಡಾ ಮೂಲದ ಕುಮಾರ ವಿ. ತಂದೆ ಚಂದ್ರ ನಾಯ್ಕ ವಿರುದ್ಧ (Complaint) ದೂರು ದಾಖಲಿಸಲಾಗಿದೆ.

ಇದನ್ನು ಓದಿ: Sankranti/ ಭಟ್ಕಳದಲ್ಲಿ ಸಂಕ್ರಾಂತಿ ಸಡಗರ