ಹುಬ್ಬಳ್ಳಿ (Hubballi):  ಗೋಕುಲ್ ರಸ್ತೆ ಪೊಲೀಸರ ತ್ವರಿತ ಕಾರ್ಯಾಚರಣೆ ನಡೆಸಿ ಸೋಮವಾರ ಮುಂಜಾನೆ ಗೋಕುಲ ಗ್ರಾಮದಲ್ಲಿ ದೊಡ್ಡ ದರೋಡೆ ಪ್ರಯತ್ನವನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದರೋಡೆಕೋರರ ಪೈಕಿ ಓರ್ವನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ (Cops Shoot Robber).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆರೋಪಿ ಮಹೇಶ ಸೀತಾರಾಮ ಕಾಳೆ (೪೮) ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ರಜನೀಕಾಂತ ದೊಡ್ಡಮನಿ ಎಂಬುವವರ ಮನೆಯನ್ನು ದರೋಡೆಗಯ್ಯಲು ಬೆಳಗಿನ ಜಾವ ೩ರ ಸುಮಾರಿಗೆ ೫-೬ ಜನರಿದ್ದ ಡಕಾಯಿತರ ತಂಡ ಪ್ರಯತ್ನಿಸಿತ್ತು. ಈ ವೇಳೆ ಎಚ್ಚೆತ್ತ ಸ್ಥಳೀಯರು ಗೋಕುಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ದರೋಡೆಕೋರರು ಪರಾರಿಯಾಗಿದ್ದಾರೆ. ಇವರಲ್ಲಿ ಓರ್ವನ ಮೇಲೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ದೇವರ ವಿಗ್ರಹ ಭಗ್ನ; ಆತಂಕದ ವಾತಾವರಣ

ಪಿಎಸ್ ಐ ಸಚಿನ್ ದಾಸರಡ್ಡಿ ನೇತೃತ್ವದ ಪೊಲೀಸ್ ತಂಡ ದರೋಡೆಕೋರರನ್ನು ಬೆನ್ನಟ್ಟಿ ರೇವಡಿಹಾಳ್ ಅಂಡರ್ ಪಾಸ್ ಬಳಿ ಮಹೇಶ ಕಾಳೆ ಎಂಬಾತನನ್ನು ಹಿಡಿದಿದ್ದಾರೆ (Cops Shoot Robber). ದರೋಡೆಕೋರರನ್ನು ಹಿಡಿಯುವ ವೇಳೆ ಪಿಎಸ್‌ಐ ದಾಸರಡ್ಡಿ ಮತ್ತು ಹೆಡ್ ಕಾನ್‌ಸ್ಟೆಬಲ್ ವಸಂತ ಗುಡಗೇರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿರುವ ಪಿಎಸೈ ಮತ್ತು ಹೆಡ್‌ ಕಾನ್ಸಟೇಬಲ್‌ ಚೇತರಿಸಿಕೊಳ್ಳುತ್ತಿದ್ದಾರೆ. ಗುಂಡಿನ ಏಟು ತಿಂದ ಆರೋಪಿ ಮಹೇಶ ಕಾಳೆ ಕೂಡ ಕಿಮ್ಸ್‌ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ (police commessioner) ಎನ್.ಶಶಿಕುಮಾರ್ ಭೇಟಿ ನೀಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಪ್ರವಾಸಕ್ಕೆ ಬಂದಿದ್ದ ಪಿಯು ವಿದ್ಯಾರ್ಥಿ ನೀರುಪಾಲು