ಮುರ್ಡೇಶ್ವರ: ಭಟ್ಕಳ (Bhatkal) ತಾಲೂಕಿನ ಸಣ್ಣಬಾವಿ ರಸ್ತೆಯ ಗಾಲ್ಫ್ ಕ್ರಾಸ್ ಹತ್ತಿರ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಅಂದರ ಬಾಹರ ಜುಗಾರಾಟವನ್ನು ಆಡಿಸುವಾಗ ಮುರ್ಡೇಶ್ವರ (Murdeshwar) ಪೊಲೀಸರು ದಾಳಿ (police raid) ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ದಾಳಿ ಕಾಲಕ್ಕೆ ೫೭೦೦ ರೂ ಸಿಕ್ಕಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯ ತನಿಖೆ ವಿಭಾಗದ ಪಿಎಸ್ಐ ಲೋಕನಾಥ ರಾಥೋಡ ನೇತೃತ್ವದಲ್ಲಿ ರವಿವಾರ ನವಂಬರ್ ೨ ರಂದು ಸಂಜೆ ೬.೩೦ ಗಂಟೆ ಸುಮಾರಿಗೆ ಈ ದಾಳಿ ನಡೆದಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಶಿರಾಲಿ ಚಿತ್ರಾಪುರ ನಿವಾಸಿ ತಿಮ್ಮಯ್ಯ ನಾರಾಯಣ ನಾಯ್ಕ (೫೩), ಸಾರದಹೊಳೆಯ ರವಿ ಶನಿಯಾರ ನಾಯ್ಕ (೪೦), ಹೊನ್ನಾವರ ತಾಲೂಕಿನ ಕಾಸರಗೋಡಿನ ರೋಷನ ಮೊಹಲ್ಲಾ ನಿವಾಸಿ ಲಕ್ಷ್ಮಣ ನಾರಾಯಣ ಗೌಡ (೪೮) ಮತ್ತು ಭಟ್ಕಳ ತಾಲೂಕಿನ ಕಾಯ್ಕಿಣಿ ಹೆರಾಡಿಯ ನಾಗರಾಜ ಜಟ್ಟಪ್ಪ ನಾಯ್ಕ (೫೦) ಬಂಧಿತರು. ಹೆರಾಡಿಯ ಮಂಜುನಾಥ ಜಟ್ಟಪ್ಪ ನಾಯ್ಕ ಮತ್ತು ಮುರ್ಡೇಶ್ವರದ ಮಾವಳ್ಳಿಯ ಕನ್ನಡ ಶಾಲೆ ಸಮೀಪದ ವಿಶ್ವನಾಥ ಮಾದೇವ ಹರಿಕಂತ್ರ ದಾಳಿಯ ವೇಳೆ (police raid) ಪರಾರಿಯಾಗಿದ್ದಾರೆ. ಈ ಆರು ಜನ ಸೇರಿದಂತೆ ಇತರರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).
ಇದನ್ನು ಓದಿ: Ambulance collision/ ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಡಿಕ್ಕಿ



