ಭಟ್ಕಳ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದೀಪಾವಳಿ ಟ್ರೋಫಿ-೨೦೨೪-೨೫ರ ತಾಲೂಕು ಮಟ್ಟದ ಲೆದರ್ ಬಾಲ್ ಕ್ರಿಕೆಟ್ (cricket) ಪಂದ್ಯಾವಳಿಯನ್ನು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೆಷನ್ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ ನಾಯ್ಕ ಉದ್ಘಾಟಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ಬ್ಯಾಂಕ್ ಉಪಾಧ್ಯಕ್ಷ ಪರಮೆಶ್ವರ ದೇವಾಡಿಗ ವಹಿಸಿದ್ದರು. ಅತಿಥಿಗಳಾಗಿ ಉದ್ಯಮಿ ಉಮೆಶ ನಾಯ್ಕ ಮತ್ತು ರೋಹಿತ ಮೊಗೇರ ಆಗಮಿಸಿದ್ದರು. ಈ ಕ್ರಿಕೆಟ್ (cricket) ಪಂದ್ಯಾವಳಿಯಲ್ಲಿ ಒಟ್ಟು ೬ ತಂಡಗಳು ಬಾಗವಹಿಸುತ್ತಿದ್ದು, ನವೆಂಬರ್ ೧೦ರ ತನಕ ನಡೆಯಲಿದೆ. ಎಸ್.ಎಸ್.ಎಸ್. ಸ್ಪೋರ್ಟ್ಸ್ ಕ್ಲಬ್ ಮತ್ತು ಹೆಬಳೆ ವಾರಿಯರ್ಸ್ ನಡುವೆ ನಡೆದ ಮೊದಲ ಪಂದ್ಯದಲ್ಲಿ ಎಸ್.ಎಸ್.ಎಸ್ ಸ್ಪೋರ್ಟ್ಸ್ ಕ್ಲಬ್ ಜಯಶಾಲಿಯಾಗಿದೆ. ಎರಡನೇ ಪಂದ್ಯದಲ್ಲಿ ವೈಕಿಂಗ್ಸ್ ಭಟ್ಕಳ ವಿರುದ್ಧ ಅನ್ವಿ ಕ್ರಿಕೆಟರ್ಸ್ ಜಯಗಳಿಸಿದೆ.
ಇದನ್ನೂ ಓದಿ : ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ
ಪಂದ್ಯಾವಳಿಯ ಪ್ರಥಮ ಬಹುಮಾನ ೫೫,೫೫೫ ರೂ. ನಗದು ಹಾಗೂ ಆಕರ್ಷಕ ಟ್ರೋಫಿ , ದ್ವಿತೀಯ ಬಹುಮಾನ ೩೩,೩೩೩ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಈ ಪಂದ್ಯಾವಳಿಯ ಪ್ರತಿ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ – ೫೦೦ ರೂ. ನಗದು ಹಾಗೂ ಟ್ರೋಫಿ, ಮ್ಯಾನ್ ಆಫ್ ದಿ ಸೀರಿಸ್ ೫೦೦೦ ರೂ. ಹಾಗೂ ಟ್ರೋಫಿ, ಬೆಸ್ಟ್ ಬ್ಯಾಟ್ಸ್ ಮೆನ್ ೩೦೦೦ ರೂ. ಹಾಗೂ ಟ್ರೋಫಿ, ಬೆಸ್ಟ್ ಬೌಲರ್ ೩೦೦೦ ರೂ. ಹಾಗೂ ಟ್ರೋಫಿ, ಎಮರ್ಜಿಂಗ್ ಪ್ಲೇಯರ್ ಅವಾರ್ಡ್ ೧೦೦೦ ರೂ. ಹಾಗೂ ಟ್ರೋಫಿ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದನ್ನೂ ಓದಿ : ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ