ಮಂಗಳೂರು (Mangaluru): ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ (Moiddeen Bawa) ಅವರ ಸಹೋದರ ಮಮತಾಜ್ ಅಲಿ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರವಿವಾರ ಮುಂಜಾನೆ ಮೂರು ಗಂಟೆಗೆ ಸುಮಾರಿಗೆ ಮನೆಯಿಂದ ಹೋಗಿದ್ದ ಮಮತಾಜ್‌ ಅಲಿ ಅವರ ಕಾರು ಡ್ಯಾಮೇಜ್ ಆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊಯಿದ್ದೀನ್‌ ಬಾವಾ (Moiddeen Bawa) ಅವರ ಸಹೋದರ ಮುಮತಾಜ್‌ ಅಲಿ ಅವರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ರವಿವಾರ ಅವರ ಶೋಧ ಕಾರ್ಯವನ್ನು ರಕ್ಷಣಾ ತಂಡಗಳು ನಡೆಸಿದ್ದವು. ಆದರೆ, ಇಂದು ನದಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.

ಇದನ್ನೂ ಓದಿ :   ದರೋಡೆಕೋರನಿಗೆ ಗುಂಡಿನೇಟು; ಪೊಲೀಸರಿಗೆ ಗಾಯ

ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಹಿತ ಆರು ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಮಹಿಳೆ ಜತೆ ಅಲಿಯವರಿಗೆ ಅಕ್ರಮ ಸಂಬಂಧವಿತ್ತೆಂದು ಅಪಪ್ರಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಡಿ ಆರು ಜನರ ವಿರುದ್ದ ದೂರು ದಾಖಲು ಮಾಡಲಾಗಿದೆ. ರೆಹಮತ್ ಎಂಬ ಮಹಿಳೆ ಮತ್ತು ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಹೆಬ್, ಸೀರಜ್ ಆರೋಪಿಗಳು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್,  ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : ದೇವರ ವಿಗ್ರಹ ಭಗ್ನ; ಆತಂಕದ ವಾತಾವರಣ