ಭಟ್ಕಳ (Bhatkal): ಹಿರಿಯ ಸಾಮಾಜಿಕ ಹೋರಾಟಗಾರ ಹಾಗೂ ಮಜ್ಲಿಸ್ ಇಸ್ಲಾಹ್-ಒ-ತಂಜೀಮ್‌ನ (Tanzeem) ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಸೈಯದ್ ಖಾಲಿದ್ (೮೫) ಶನಿವಾರ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು (passed away).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸುಮಾರು ೨೮ ವರ್ಷಗಳ ಕಾಲ ಅಬುಧಾಬಿಯಲ್ಲಿ (abudhabi) ಉದ್ಯೋಗ ಮಾಡಿಕೊಂಡು ಅಲ್ಲಿ ನವಾಯತ್ (Nawayat) ಸಮುದಾಯದ ಮರ್ಕಝಿ ಅನ್ ನವಾಯತ್ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಟ್ಕಳ ಮುಸ್ಲಿಮ್ ಜಮಾಅತೆ ಅಬುಧಾಬಿಯ ಎರಡು ಅವಧಿ ಕಾರ್ಯದರ್ಶಿಯಾಗಿ ಹಾಗೂ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸೈಯದ್ ಖಾಲಿದ್ ೨೦೦೨ರಲ್ಲಿ ಭಟ್ಕಳಕ್ಕೆ ಮರಳಿದ ನಂತರ ಸಮಾಜದ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದರು. ೨೦೦೯ರಲ್ಲಿ ಅವರು ಮಜ್ಲಿಸ್ ಇಸ್ಲಾಹ್-ಒ-ತಂಜೀಮ್‌ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಅಂಜುಮನ್ (anjuman), ರಾಬಿತಾ ಸೂಸೈಟಿ ಸೇರಿದಂತೆ ಹಲವಾರು ಸಂಘನೆಗಳಲ್ಲಿ ಇವರು ತೊಡಗಿಸಿಕೊಂಡಿದ್ದರು.
ಇದನ್ನೂಓದಿ : ಶೌಚದಗುಂಡಿ ನಿರ್ಮಾಣಕ್ಕೆ ಉದ್ಯಮಿ ಸಹಾಯಹಸ್ತ
ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಇಂದು ಬೆಳಿಗ್ಗೆ ೧೧ ಗಂಟೆಗೆ ನಿಧನರಾದರು(passed away). ಮೃತದೇಹವನ್ನು ಭಟ್ಕಳಕ್ಕೆ ತರಲಾಗಿದ್ದು, ಇಂದು ರಾತ್ರಿ ೧೦ ಗಂಟೆಗೆ ಭಟ್ಕಳ ಜುಮಾ ಮಸೀದಿಯಲ್ಲಿ ಜನಾಜಾ ನಮಾಝ್ ನಡೆಯಲಿದೆ. ನಂತರ ಹಳೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇವರಿಗೆ ಪತ್ನಿ, ಏಳು ಪುತ್ರಿಯರು, ಓರ್ವ ಪುತ್ರ, ಮೊಮ್ಮಕ್ಕಳು ಇದ್ದಾರೆ. ಇವರ ನಿಧನಕ್ಕೆ ಭಟ್ಕಳ ಮುಸ್ಲಿಂ ಖಲೀಜ್ ಕೌನ್ಸಿಲ್‌ನ ಅಧ್ಯಕ್ಷ ಮುಹಮ್ಮದ್ ಫಾರೂಕ್ ಮಿಸ್ಬಾಹ್, ಪ್ರಧಾನ ಕಾರ್ಯದರ್ಶಿ ಅತಿಕುರ್ರಹ್ಮಾನ್ ಮುನಿರಿ, ಮಜ್ಲಿಸ್ ಇಸ್ಲಾಹ್-ಒ-ತಂಜೀಮ್‌ನ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ನದ್ವಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅಂಜುಮನ್ ಕಾಲೇಜು ಬಳಿ ಗಾಂಜಾ ಮಾರಾಟ !