ಭಟ್ಕಳ (Bhatkal): ದೀಪಾವಳಿ ಹಬ್ಬದ ನಂತರ ಕರಾವಳಿಯಿಂದ (coastal) ಬೆಂಗಳೂರಿಗೆ (Bengaluru) ವಿಶೇಷ ರೈಲು (Deepavali Special) ಹಿಂತಿರುಗಿಸಬೇಕೆಂಬ ಕರಾವಳಿ ಜನರ ಬೇಡಿಕೆಗೆ ಸ್ಪಂದಿಸಿರುವ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ನ.೩ರಂದು ಕಾರವಾರದಿಂದ (Karwar) ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ಗೆ (SMVT) ರೈಲು ಓಡಿಸಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರೈಲು ಸಂಖ್ಯೆ ೦೧೬೮೬ ಎಕ್ಸ್‌ಪ್ರೆಸ್ ವಿಶೇಷ (Deepavali Special) ರೈಲು ನವೆಂಬರ್ ೩ ರಂದು ಭಾನುವಾರ ಮಧ್ಯಾಹ್ನ ಕಾರವಾರದಿಂದ ಹೊರಟು, ಮರುದಿನ ಬೆಳಿಗ್ಗೆ ೪ ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪುತ್ತದೆ. ಅಂಕೋಲಾ (೧೨.೨೫ಕ್ಕೆ), ಗೋಕರ್ಣ ರಸ್ತೆ (೧೨.೩೫ಕ್ಕೆ), ಕುಮಟಾ (೧೨.೫೨ಕ್ಕೆ), ಹೊನ್ನಾವರ (೧.೦೫ಕ್ಕೆ) ಮುರ್ಡೇಶ್ವರ (೧.೪೦ಕ್ಕೆ) ಭಟ್ಕಳ (೧.೫೫), ಬೈಂದೂರು (೨.೧೪), ಕುಂದಾಪುರ (೨.೪೨), ಉಡುಪಿ (೩.೩೨), ಮೂಲ್ಕಿ (ಸಂಜೆ ೪.೦೦), ಸುರತ್ಕಲ್ (೪.೧೪), ಬಂಟ್ವಾಳ (೬.೨೦), ಸಕಲೇಶಪುರ (ರಾತ್ರಿ ೧೦.೧೫), ಹಾಸನ (೧೧.೩೦), ಚನ್ನರಾಯಪಟ್ಟಣ (೧೧.೫೨), ಕುಣಿಗಲ್ (ಮಧ್ಯರಾತ್ರಿ ೨.೧೦) ಮತ್ತು ಚಿಕ್ಕಬಾಣಾವರ (ಬೆಳಿಗ್ಗೆ ೩.೧೭) ಮೂಲಕ ರೈಲು ಸಂಚರಿಸಲಿದೆ.
ಇದನ್ನೂ ಓದಿ : ಸುಪ್ರೀಂನಲ್ಲಿ ಅರಣ್ಯವಾಸಿಗಳ ಪರ ಹೋರಾಟ