ಭಟ್ಕಳ (Bhatkal): ಮುರುಡೇಶ್ವರದಲ್ಲಿ (Murudeshwar) ವೇಶ್ಯಾವಾಟಿಕೆ ನಡೆಸುತಿದ್ದ ಲಾಡ್ಜ್ ಮೇಲೆ  ಪೊಲೀಸರು ದಾಳಿ ನಡೆಸಿ (police raid in lodge) ಕೊಲ್ಕತ್ತಾ ಮೂಲದ ಮಹಿಳೆಯನ್ನು ರಕ್ಷಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಹಿಳೆಗೆ ಹಣದ ಆಮಿಷ ತೋರಿಸಿ ಬೆಂಗಳೂರಿನಿಂದ (Bengaluru) ಕರೆತಂದು ಲಾಡ್ಜ್‌ನಲ್ಲಿ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮುರುಡೇಶ್ವರದ (Murdeshwar) ನಾಯ್ಕ ರೆಸಿಡೆನ್ಸಿ ಮೇಲೆ ಸಿಪಿಐ ಸಂತೋಷ್ ಕಾಯ್ಕಿಣಿ ಹಾಗೂ ಪಿಎಸ್ಐ ಹನುಮಂತ ಬಿರಾದಾರ ತಂಡ ದಾಳಿ ಮಾಡಿದೆ (police raid in lodge). ಸಿದ್ದಾಪುರದ (siddapur) ಗಣೇಶ ನಾಯ್ಕ, ಮುರುಡೇಶ್ವರದ ನಾಯ್ಕ ರೆಸಿಡೆನ್ಸಿ ಮಾಲೀಕ ವಿನಾಯಕ ಮಹಾದೇವ ನಾಯ್ಕ, ರೂಮ್ ಬಾಯ್ ಆಕಾಶ ಅನಿಲ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನು ಓದಿ: Engineering College/ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿ ಸಾವಿಗೆ ಕಾರಣರಾರು?

‘ಮಹಿಳೆಯನ್ನು ಸಾಂತ್ವನ ಕೇಂದ್ರದಲ್ಲಿ ಬಿಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ೪೬೩೦ ರೂ ನಗದು, ಎರಡು ಮೊಬೈಲ್, ಕಾಂಡಮ್ ಪ್ಯಾಕೇಟ್ ಗಳು, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು (complaint filed) ಮಾಡಲಾಗಿದೆ.

ಇದನ್ನು ಓದಿ: Theft case/ ಬಾಣಂತನಕ್ಕೆ ಹೋದಾಗ ಮನೆ ಕಳ್ಳತನ