ಭಟ್ಕಳ: ಇಲ್ಲಿನ ಸಾರದಹೊಳೆಯ ಶ್ರೀ ಕೋಟೆ ಹನುಮಂತ  ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ಧನುರ್ಮಾಸ (Dhanurmasa) ಪ್ರಯುಕ್ತ ನಡೆದ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ಸಂಪನ್ನಗೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಧನುರ್ಮಾಸದ (Dhanurmasa) ಪೂಜೆಯ ಕೊನೆಯ ದಿನ ಬೆಳಿಗ್ಗಿನ ಜಾವ ೩ ಗಂಟೆಯಿಂದಲೇ ಭಕ್ತರು ದೇವಸ್ಥಾನದತ್ತ ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಶ್ರೀ ದೇವರ ಅಬಿಷೇಕ್ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇದನ್ನು ಓದಿ: fisherman/ ರಸ್ತೆ ದಾಟಲು ನಿಂತಿದ್ದ ಮೀನುಗಾರನಿಗೆ ಕಾರು ಡಿಕ್ಕಿ 

ಅರ್ಚಕ ಲೋಹಿತ ಭಟ್ ನೇತೃತ್ವದಲ್ಲಿ ಶ್ರೀ ದೇವರಿಗೆ ಅಭಿಷೇಕ, ಅಲಂಕಾರ ನೆರವೇರಿಸಲಾಗಿದ್ದು ಸುಮಾರು ೫ ಗಂಟೆಯ ಹೊತ್ತಿಗೆ ಮಹಾಪೂಜೆ ಮಹಾಮಂಗಳಾತಿಯನ್ನು ನೆರವೇರಿಸಲಾಯಿತು. ನಂತರ ಬಂದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿ, ಬೆಳಗ್ಗಿನ ಉಪಹಾರವನ್ನು ಸಹ ನೀಡಲಾಯಿತು.

ಇದನ್ನು ಓದಿ: Assaulted/ ದೂರು ಹಿಂಪಡೆಯದಿದ್ದಕ್ಕೆ ನಡೆಯಿತು ಹಲ್ಲೆ

ಡಿಸೆಂಬರ್  ೧೬ರಿಂದ ಜನವರಿ ೧೪ರವರೆಗೆ  ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ಒಟ್ಟು ೩೦ ದಿನಗಳ ಕಾಲ ಶ್ರೀ ದೇವರಿಗೆ ಧನುರ್ಮಾಸದ ಪೂಜೆ ನೆರವೇರಿಸಲಾಗಿದೆ. ಧನುರ್ಮಾಸ ಪೂಜೆಯಲ್ಲಿ ವಿಶೇಷವಾಗಿ ಹಳೆಕೋಟೆ ಹನುಮಂತ ದೇವನಿಗೆ ಪುಷ್ಪಾಭಿಷೇಕ, ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ ಮಾಡಲಾಗಿದ್ದು ಈ ಎಲ್ಲಾ ದಿನಗಳಿಗೆ ಭಕ್ತರು ಸಾಮಾನ್ಯ ದಿನಗಳಿಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳಗಿನ ಪ್ರಾತಃ ಕಾಲದಲ್ಲಿ ಪಾಲ್ಗೊಂಡಿದ್ದರು.

ಇದನ್ನು ಓದಿ: Assaulted/ ದೂರು ಹಿಂಪಡೆಯದಿದ್ದಕ್ಕೆ ನಡೆಯಿತು ಹಲ್ಲೆ

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ ಮಾತನಾಡಿ, ಧನುರ್ಮಾಸದಲ್ಲಿ ದೇವಾನುದೇವತೆಗಳು ಬ್ರಾಹ್ಮೀ ಮುಹೂರ್ತದಲ್ಲಿ ಏಳುತ್ತಾರೆ ಎನ್ನುವ ನಂಬಿಕೆಯಿದೆ. ಈ ಅವಧಿಯಲ್ಲಿ ಭಗವಾನ್ ವಿಷ್ಣುವಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು. ಒಂದು ದಿನದ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ೧ ಸಾವಿರ ವರ್ಷದವರೆಗೆ ವಿಷ್ಣು ದೇವನನ್ನು ಪೂಜಿಸಿದ ಪುಣ್ಯ ಫಲವನ್ನು ಭ ಕ್ತರು ಪಡೆದಕೊಳ್ಳಬಹುದು ಎಂಬ ನಂಬಿಕೆಯಿದೆ ಎಂದರು.

ಇದನ್ನು ಓದಿ: Makara Sankranti/ ವೈಜ್ಞಾನಿಕ ವೈಚಾರಿಕ ಹಿನ್ನೆಲೆಯ ಅರ್ಥಪೂರ್ಣ ಹಬ್ಬ ಮಕರ ಸಂಕ್ರಾಂತಿ

ಪೂಜಾ ಕಾರ್ಯಕ್ರಮದ ನಂತರ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ಸಂಕಲ್ಪ ಸೇವೆ ಹಾಗೂ ಉಪಹಾರ ಸೇವೆ ನೀಡಿದವರಿಗೆ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷರಾದ ರಾಜು ನಾಯ್ಕ, ಕಾರ್ಯದರ್ಶಿ ರವೀಂದ್ರ ನಾಯ್ಕ, ಮಾಜಿ ಅಧ್ಯಕ್ಷರಾದ ಆರ್.ಕೆ.ನಾಯ್ಕ, ವಿನಾಯಕ ನಾಯ್ಕ, ಶಂಕರ ನಾಯ್ಕ, ಅಣ್ಣಪ್ಪ ನಾಯ್ಕ, ವಾಸು ನಾಯ್ಕ ಹಾಗೂ ಸ್ವಯಂ ಸೇವಕರು ಭಕ್ತಾದಿಗಳಿಗೆ ಶ್ರೀ ದೇವರ ದರ್ಶನ ಮಾಡಲು ಸಹಕರಿಸಿದರು.

ಇದನ್ನು ಓದಿ: cyber complaint/ ಸೈಬರ್ ದೂರು ಕೊಟ್ಟ ನಂತರವೂ ಖಾತೆಯಿಂದ ಹಣ ಮಾಯ