ಭಟ್ಕಳ (Bhatkal): ರಾಜ್ಯದ (Karnataka) ಮೂರು ವಿಧಾನಸಭೆಯ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಮುರುಡೇಶ್ವರದಲ್ಲಿ (Murudeshwar) ಡಿ.ಕೆ ಶಿವಕುಮಾರ (DK Shivakumar) ಹೇಳಿದ್ದು ನಿಜವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಅವರು ಮುರುಡೇಶ್ವರದಲ್ಲಿ (Murdeshwar)  ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆ (fisheries day) ಕಾರ್ಯಕ್ಕೆ ಆಗಮಿಸಿ ಪುನಃ ಬೆಂಗಳೂರಿಗೆ (Bengaluru) ತೆರಳುವ ವೇಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಚನ್ನಪಟ್ಟಣ (Channapattana), ಸಂಡೂರು (Sandur), ಶಿಗ್ಗಾಂವಿ (shiggaon) ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಬಗ್ಗೆ ಕೆಲವು ಚುನಾವಣೋತ್ತರ ಸಮೀಕ್ಷೆಗಳು (exit pol) ಕಾಂಗ್ರೆಸ್‌ಗೆ (congress) ಸೋಲಿನ ಸುಳಿವು ನೀಡಿತ್ತು.

ಇದನ್ನೂ ಓದಿ: ಭಟ್ಕಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

ಈ ಬಗ್ಗೆ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಚುನಾವಣೋತ್ತರ ಸಮೀಕ್ಷೆಗಳೆಲ್ಲ ಸುಳ್ಳಾಗಲಿದೆ. ಈಗಾಗಲೇ ಬಂದಿರುವ ಎಕ್ಸಿಟ್ ಪೋಲ್ ಸಂಪೂರ್ಣವಾಗಿ ಉಲ್ಟಾ ಆಗಲಿದೆ. ಚನ್ನಪಟ್ಟಣ ಸೇರಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಡಿ.ಕೆ.ಶಿವಕುಮಾರ (DK Shivakumar) ಹೇಳಿದ್ದರು. ಅದರಂತೆ ಇಂದು ಫಲಿತಾಂಶ ಪ್ರಕಟಗೊಂಡಿದ್ದು ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ :   ಡಿಸೆಂಬರ್‌ನಲ್ಲಿ 8 ದಿನ ಶಾಲೆಗಳಿಗೆ ರಜೆ; ಯಾಕೆ ಗೊತ್ತಾ?