ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ಹುಲ್ಲುಕ್ಕಿ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಕೋಳಿ ಅಂಕ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಂಜುನಾಥ ಎ ಲಿಂಗಾರೆಡ್ಡಿ ನೇತೃತ್ವದಲ್ಲಿ ಪೊಲೀಸ್ ತಂಡವು ದಾಳಿ ನಡೆಸಿ, ಪ್ರಕರಣ ದಾಖಲಿಸಿದೆ (case filed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಾಚರಣೆಯ ವೇಳೆ ಸಬ್ಬತ್ತಿಯ ನಾರಾಯಣ ಕುಪ್ಪಯ್ಯ ನಾಯ್ಕ, ಯಲ್ವಡಿಕವೂರು ನಿವಾಸಿ ಗೋಪಾಲ ನಾರಾಯಣ ನಾಯ್ಕ ಮತ್ತು ಕಾಯ್ಕಿಣಿಯ ರಾಮಕೃಷ್ಣ ಶಂಕರ ನಾಯ್ಕ ಅವರನ್ನು ಜೂಜಾಟದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬಂಧಿಸಲಾಗಿದೆ. ಇನ್ನೂ ಹಲವರು ಅರಣ್ಯ ಪ್ರದೇಶದಲ್ಲಿ ಓಡಿ ಹೋಗಿರುವ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ: Fisherman’s body found/ ಹೊನ್ನೇಗದ್ದೆಯ ಸಮುದ್ರ ತೀರದಲ್ಲಿ ಮೀನುಗಾರನ ಮೃತದೇಹ ಪತ್ತೆ
ದಾಳಿಯಲ್ಲಿ ಪೊಲೀಸರು 5 ದ್ವಿಚಕ್ರ ವಾಹನಗಳು, 4 ಆಟೋ ರಿಕ್ಷಾಗಳು ಮತ್ತು ಮೂರು ಮೊಬೈಲ್ ಸೇರಿದಂತೆ ರೂ.18.83 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಟ್ಟು 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿತ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನು ಓದಿ: fishermen missing/ ದೋಣಿ ಮುಳುಗಿ ನಾಲ್ವರು ಮೀನುಗಾರರು ನಾಪತ್ತೆ
ಗ್ರಾಮೀಣ ಠಾಣೆಯ ಈ ಕಾರ್ಯಾಚರಣೆಗೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನು ಓದಿ: Bike Accident/ ಬಸ್ತಿಮಕ್ಕಿ ಕ್ರಾಸ್ ಬಳಿ ಅಪಘಾತ: ಬೈಕ್ ಸವಾರ ಗಂಭೀರ



