ಭಟ್ಕಳ: ಡ್ರಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ (Drink drive) ಗಂಭೀರ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಮಂಜುನಾಥ್ ಲಿಂಗಾರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆ ದೀಪನ್ ಈ ಕಠಿಣ ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೆಲ ದಿನಗಳ ಹಿಂದೆ ಡ್ರಂಕ್ ಡ್ರೈವ್ ಪ್ರಕರಣ (Drunk drive) ದಾಖಲಿಸಿಕೊಂಡ ವೇಳೆ ಆರೋಪಿಯಿಂದ ₹15 ಸಾವಿರ ದಂಡವನ್ನು ಸ್ವೀಕರಿಸಲಾಗಿತ್ತು. ಈ ಮೊತ್ತವನ್ನು ಕೋರ್ಟ್‌ಗೆ ಜಮಾ ಮಾಡಬೇಕಾಗಿದ್ದರೂ, ಅದನ್ನು ಪಾವತಿಸದೆ ಉಳಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿ ಜುಲೈ ತಿಂಗಳಲ್ಲಿ ದೂರು ದಾಖಲಾಗಿದ್ದು, ದೂರಿನ ಆಧಾರದಲ್ಲಿ ಎಸ್ಪಿ ತನಿಖೆಗೆ ಸೂಚಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಸಿಪಿಐ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಇದನ್ನು ಓದಿ: NSS/ ಎನ್ಎಸ್ಎಸ್ ವಾರ್ಷಿಕ ಶಿಬಿರ ಸಂಪನ್ನ

ಇದೇ ಪ್ರಕರಣದಲ್ಲಿ ಸಿಪಿಐಗೆ ಸಹಕರಿಸಿದ್ದ ಆರೋಪದ ಮೇಲೆ ಭಟ್ಕಳ ಗ್ರಾಮೀಣ ಠಾಣೆಯ ಹೆಡ್ ಕಾನ್ಸ್ಟೆಬಲ್ ಅಶೋಕ ನಾಯ್ಕ್ ಅವರನ್ನೂ ಅಮಾನತು ಮಾಡಲಾಗಿದೆ. ದೂರು ನೀಡಬೇಡಿ ಎಂದು ಸಾರ್ವಜನಿಕರನ್ನು ಗದರಿಸಿದ ಆರೋಪವೂ ಹೆಡ್ ಕಾನ್ಸ್ಟೆಬಲ್ ವಿರುದ್ಧ ಕೇಳಿಬಂದಿದೆ.

ಇದನ್ನು ಓದಿ: Bhatkal Journalists/ ಭಟ್ಕಳ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ