ಭಟ್ಕಳ (Bhatkal) : ಮುಸ್ಲಿಂ (Muslim) ಧರ್ಮೀಯರ ಪವಿತ್ರ ಈದ್ ಉಲ್ ಫಿತ್ರ್ (Eid ul Fitr) ಹಬ್ಬವನ್ನು ಭಟ್ಕಳದಲ್ಲಿ ಸಂಭ್ರಮ – ಸಡಗರದಿಂದ ಆಚರಿಸಲಾಯಿತು. ಒಂದು ತಿಂಗಳುಗಳ ಕಾಲ ನಡೆಯುವ ಪವಿತ್ರ ರಂಜಾನ್ (Ramadan) ಮಾಸದ ಉಪವಾಸ ಆಚರಣೆಯ ಬಳಿಕ ಭಾನುವಾರ ರಾತ್ರಿ ಚಂದ್ರ ದರ್ಶನವಾದ ಕಾರಣ ಸೋಮವಾರ ಭಟ್ಕಳದಲ್ಲಿ ಹಬ್ಬ ಆಚರಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದಲ್ಲಿ ಈದ್ ಉಲ್ ಫಿತ್ರ್ (Eid ul Fitr) ಹಬ್ಬದ ಪ್ರಯುಕ್ತ ಮುಸ್ಲಿಮರಿಂದ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಾರ್ಥನೆಗೂ ಮುನ್ನ ಪಟ್ಟಣದ ಜಾಮಿಯಾ ಮಸೀದಿಯಿಂದ ಮೌಲಾನಾ ಅಬ್ದುಲ್ ಅಲೀಂ ಖತೀಬ್ ನದ್ವಿ ಅವರನ್ನು ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ (Eidgah ground) ಕರೆತರಲಾಯಿತು. ಮೈದಾನದಲ್ಲಿ ಸಾವಿರಾರು ಜನ ಮುಸ್ಲಿಮರು ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಿದರು. ಬಳಿಕ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ಸಿಹಿ ತಿನಿಸು, ಬಗೆಬಗೆಯ ಖಾದ್ಯಗಳನ್ನು ನೆರೆಹೊರೆಯವರು, ಕುಟುಂಬಸ್ಥರೊಂದಿಗೆ ಹಂಚಿಕೊಂಡು ಸಂಭ್ರಮಿಸಿದರು.

ಇದನ್ನೂ ಓದಿ : High alert / ಭಟ್ಕಳದಲ್ಲಿ ಬಾಂಬ್‌ ನಿಷ್ಕ್ರಿಯ ದಳದಿಂದ ತಪಾಸಣೆ