ಭಟ್ಕಳ (Bhatkal) : ಗೂಡಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ವ್ಯಾಪಾರಿಯ ವಿರುದ್ಧ ಮುರ್ಡೇಶ್ವರ (Murdeshwar) ಅಬಕಾರಿ ಕಾಯ್ದೆಯಡಿ (Excise Act) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರುಡೇಶ್ವರದ (Murudeshwar) ಮಾವಳ್ಳಿ-೧ರ ಸೋನಾರಕೇರಿ ನಿವಾಸಿ ಕೃಷ್ಣ ಮಾರಿ ನಾಯ್ಕ (೫೪) ಸಿಕ್ಕಿ ಬಿದ್ದ ಆರೋಪಿ. ನಿನ್ನೆ ಸೆ.೧೨ರಂದು ರಾತ್ರಿ ೭.೩೦ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮದ್ಯ ತುಂಬಿರುವ ೧೦ ಟೆಟ್ರಾ ಪ್ಯಾಕೆಟ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುರ್ಡೇಶ್ವರ ಠಾಣೆ ಪಿಎಸ್ಐ ಹಣಮಂತ ಬಿರಾದಾರ ಕರ್ನಾಟಕ ಅಬಕಾರಿ ಕಾಯ್ದೆಯಡಿ (Excise Act) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಓಸಿ ಅಡ್ಡೆ ಮೇಲೆ ದಾಳಿ; ಓರ್ವನ ಬಂಧನ