ಶಿವ ಮತ್ತು ತಮ್ಮ ಪೂರ್ವಜರ ಆರಾಧನೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಒಂದು ಸಾಂಪ್ರದಾಯಿಕ ನೃತ್ಯ ಪ್ರಕಾರವೇ ಗೊಂಡರ ಡೆಕ್ಕೆ ಕುಣಿತ (Dekke Kunita) ಎಂದು ಹೇಳಲಾಗುತ್ತದೆ. ಗೊಂಡ ಸಮುದಾಯ ಇರುವ ಕರ್ನಾಟಕದ (Karnataka) ಬಾಗಲಕೋಟ (Bagalkot), ಬೆಳಗಾವಿ (Belagavi), ಬೀದರ (Bidar) ಹಾಗೂ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಈ ನೃತ್ಯ ಪ್ರಕಾರವನ್ನು ಕಾಣಬಹುದಾಗಿದೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ವಿಶೇಷ ವಾಗಿ ಡೆಕ್ಕೆ ಕುಣಿತ ಪ್ರಾಮುಖ್ಯ ಪಡೆದಿದ್ದು ತನ್ನದೇ ಛಾಪನ್ನು ಮೂಡಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಎರಡು ದಿನಗಳ ಕಾಲ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಈ ಬುಡಕಟ್ಟು ಗೊಂಡ ಸಮುದಾಯದವರು ತಮ್ಮ ಪೂರ್ವಜರು ಆಚರಿಸಿಕೊಂಡು ಬಂದ ಸಂಪ್ರದಾಯದಂತೆ ಮನೆಮನೆಗೆ ತೆರಳಿ ಇಂದಿಗೂ ಡೆಕ್ಕೆ ಕುಣಿತ ಮಾಡುತ್ತಾ ಬರುತ್ತಿದ್ದಾರೆ. ಈ ಸಮುದಾಯದವರು ತಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯ, ಪದ್ಧತಿಗಳನ್ನು ಚಾಚೂ ತಪ್ಪದೇ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.

Appeal to SP/ ಅನಧಿಕೃತ ಮದರಸಾ ಮುಚ್ಚಿಸಲು ಆಗ್ರಹ

ವರ್ಷಂಪ್ರತಿ ಈ ದಿನದಲ್ಲಿ ಭಟ್ಕಳದ ಹಾಡುವಳ್ಳಿ, ಮಾರೂಕೇರಿ, ಕೋಣಾರ, ಕೊಪ್ಪ, ಮುಟ್ಟಳ್ಳಿ, ಬೆಳಕೆ ಗ್ರಾಪಂ ವ್ಯಾಪ್ತಿಯಲ್ಲಿ ಗೊಂಡ ಸಮಾಜದವರು ರಾತ್ರಿ ಸಂದರ್ಭದಲ್ಲಿ ತಮ್ಮ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮದ ಮನೆಮನೆಗಳಿಗೆ ತೆರಳಿ ಡೆಕ್ಕೆ ಕುಣಿತ ನಡೆಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

attacked/ ರಸ್ತೆ ಅಗೆತ ಪ್ರಶ್ನಿಸಿದ್ದಕ್ಕೆ ಮಹಿಳೆ ಸಹಿತ ಇಬ್ಬರ ಮೇಲೆ ಹಲ್ಲೆ

ತಲೆಗೆ ಕೆಂಪು ಹೂವು ಹಾಗೂ ಸೀರೆ, ಮಡಿ (ಕೇಸರಿ ವಸ್ತ್ರ) ಧರಿಸಿ ಶೃಂಗಾರ ಮಾಡಿಕೊಂಡು ಡೆಕ್ಕೆ ಬಡಿದು ಸಂಪ್ರದಾಯದಂತೆ ವಿಶಿಷ್ಟ ರೀತಿಯಲ್ಲಿ ಕುಣಿಯುತ್ತಾರೆ. ಆಧುನಿಕ ಕಾಲಘಟ್ಟದಲ್ಲಿಯೂ ಪ್ರತಿ ಮನೆಯ ಸದಸ್ಯರೂ ಸಹ ಡೆಕ್ಕೆ ಕುಣಿತದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು ಅವರ ನಂಬಿಕೆ ಶ್ರದ್ಧೆಯ ದ್ಯೋತಕವಾಗಿದೆ.

attacked/ ರಸ್ತೆ ಅಗೆತ ಪ್ರಶ್ನಿಸಿದ್ದಕ್ಕೆ ಮಹಿಳೆ ಸಹಿತ ಇಬ್ಬರ ಮೇಲೆ ಹಲ್ಲೆ

ಮನೆ ಮನೆಗಳಿಗೆ ತೆರಳುವ ಪೂರ್ವದಲ್ಲಿ ಸಂಪ್ರದಾಯದಂತೆ ಇವರು ಗ್ರಾಮದ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಾರೆ. ಡೆಕ್ಕೆ ಕುಣಿತ ಈ ಸಮುದಾಯದಲ್ಲಿ ತಲೆ ತಲಾಂತರದಿಂದಲೂ ನಡೆದುಕೊಂಡು ಬಂದಿದ್ದು, ಇಂದಿಗೂ ಮುಂದುವರಿಸಿಕೊಂಡು ಬರುವ ಮೂಲಕ ಬುಡಕಟ್ಟು, ಗ್ರಾಮೀಣ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

Dongarapalli/ ಭಟ್ಕಳ ಡೊಂಗರಪಳ್ಳಿ ಸಮಿತಿಗೆ ಫೈಜಾನ್ ನದ್ವಿ ಅಧ್ಯಕ್ಷ, ಇನಾಯತ್ ಗವಾಯಿ ಪ್ರಧಾನ ಕಾರ್ಯದರ್ಶಿಯಾಗಿ

ಡೆಕ್ಕೆ ಕುಣಿತದಲ್ಲಿ ಕಾಮನ ಅಂಗಿ ವೇಷವೂ ಸಹ ಆಕರ್ಷಣೀಯವಾಗಿದೆ. ಕಾಮನಂಗಿಯ ವೇಷ ಕಂಡರೆ ಮಕ್ಕಳು ಹೊರ ಬರಲು ಭಯಗೊಳ್ಳುತ್ತಾರೆ. ಈ ಕುಣಿತ ಮಾಡುವವರು ಬರಿಗಾಲಲ್ಲಿ ನಡೆಯುವುದು ಕೂಡ ವಿಶೇಷವಾಗಿದೆ. ಡೆಕ್ಕೆ ಕುಣಿತವನ್ನು ಇವರು ಎರಡು ಮೂರು ರೀತಿಯಲ್ಲಿ ಮಾಡಿ ಗಮನ ಸೆಳೆಯುತ್ತಾರೆ. ಡೆಕ್ಕೆ ಕುಣಿತದವರಿಗೆ ಪ್ರತಿ ಮನೆಗಳಲ್ಲಿಯೂ ಕಾಯಿ, ಬಾಳೆ ಹಣ್ಣು, ಹಣ ನೀಡಿ ಸ್ಪಂದಿಸುತ್ತಾರೆ. ಗೌರವದಿಂದ ಕಾಣುತ್ತಾರೆ. ಗ್ರಾಮದ ಮನೆಗಳಲ್ಲಿ ಮದುವೆ, ದೇವರ ಕಾರ್ಯದಂತಹ ಶುಭ ಕಾರ್ಯಗಳು ನಡೆದಿದ್ದಲ್ಲಿ ಡೆಕ್ಕೆ ಕುಣಿಯುವವರಿಗೆ ಮನೆಯವರು ಚಹಾ, ಸಿಹಿ ತಿಂಡಿ ನೀಡಿ ಹೊಸ ಮಡಿ ವಿತರಿಸಿ ಕುಣಿಸುವ ಪದ್ಧತಿಯೂ ಕೂಡ ಇರುವುದನ್ನು ಗಮನಿಸಬಹುದಾಗಿದೆ.

Makkala Santhe/ ಮಣ್ಕುಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ

ಈ ದಿನಗಳಲ್ಲಿ ಸಂಗ್ರಹಿಸಿದ ಹಣವನ್ನು ಗೊಂಡರು ಅವಲಕ್ಕಿ ಪ್ರಸಾದ ಮಾಡಿ ಗ್ರಾಮದ ಪ್ರಮುಖರು ಮತ್ತು ಸಮುದಾಯದವರಿಗೆ ಹಂಚಿದ ಬಳಿಕ ಉಳಿದ ಹಣವನ್ನು ತಮ್ಮ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ, ಅನಾರೋಗ್ಯ ಪೀಡಿತರ ಚಿಕಿತ್ಸೆ ಹೀಗೆ ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಇದು ಇವರ ಸಮುದಾಯದ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಸಂಪ್ರದಾಯ ಮತ್ತು ಮಾನವೀಯತೆಯ ಕೊಂಡಿಯಾಗಿಯೂ ಡೆಕ್ಕೆ ಕುಣಿತ ಕಾಣಿಸಿಕೊಳ್ಳುತ್ತದೆ.

Bike theft/ ಅಳ್ವೆಕೋಡಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ

ಡೆಕ್ಕೆ ಕುಣಿತ ಬುಡಕಟ್ಟು ಗೊಂಡ ಸಮುದಾಯದ ಒಂದು ಸಾಂಪ್ರದಾಯಿಕ ಜಾನಪದ ಕಲೆಯಾಗಿದ್ದು, ಇದು ತಾಲೂಕು,ಜಿಲ್ಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು,ಜನಪದ ಹಾಗೂ ಸಾಹಿತ್ಯ ಸಮ್ಮೇಳನಗಳು, ರಾಜ್ಯೋತ್ಸವ ಹಾಗೂ ಹಂಪಿ ಉತ್ಸವ, ಮೈಸೂರು ದಸರಾದಂತಹ ಕಾರ್ಯಕ್ರಮದಲ್ಲೂ ಪ್ರದರ್ಶಿಸುತ್ತಿರುವುದು ಗಮನಾರ್ಹ ಸಂಗತಿ. ಇತ್ತೀಚೆಗೆ ಈ ಸಮುದಾಯದ ಡೆಕ್ಕೆ ಕುಣಿತ ದುಬೈನಂತಹ ವಿದೇಶದಲ್ಲಿಯೂ ಪ್ರದರ್ಶನಗೊಂಡಿರುವುದು ಜನಪದ ಕಲೆಯ ಮಹತ್ವ ಹೊರದೇಶದಲ್ಲಿಯೂ ಪ್ರಸಾರವಾದಂತಾಗಿದೆ.

Arrested/ ಮಲ್ನಾಡು ಗಿಡ್ಡ ತಳಿಯ ಆಕಳ ಹತ್ಯೆ ಮಾಡಿದ ಅಪ್ರಾಪ್ತ ಸಹಿತ ಇಬ್ಬರ ಬಂಧನ

ತಮ್ಮ ಪೂರ್ವಜರು ಯಾವ ರೀತಿಯಲ್ಲಿ ಜಾನಪದ ಕಲೆ ಪ್ರದರ್ಶಿಸುತ್ತಿದ್ದರೋ ಅದೇ ಮಾದರಿಯಲ್ಲಿ ಇಂದಿನ ಯುವ ಪೀಳಿಗೆಯವರೂ ಸಹ ಅದನ್ನು ಅಷ್ಟೇ ಆಸಕ್ತಿಯಿಂದ ಸಂಪ್ರದಾಯಬದ್ಧವಾಗಿ ಶ್ರದ್ಧೆ, ಭಕ್ತಿಪೂರ್ವಕವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ಇಂದಿನ ಎಲ್ಲ ಸಮುದಾಯಕ್ಕೆ ಮಾದರಿ ಎಂದರೆ ತಪ್ಪಾಗಲಾರದು.

Arudha Shri/ ಬಸವನ ಬಾಗೇವಾಡಿಯಲ್ಲಿ ಉಮೇಶ ಮುಂಡಳ್ಳಿಗೆ ‘ಆರೂಢ ಶ್ರೀ’ ಪ್ರದಾನ 

ಏನೇ ಇರಲಿ ಇಂತಹ ಸಂಪ್ರದಾಯ, ಆಚರಣೆ, ಜನಪದ ನೃತ್ಯ ಪ್ರಕಾರಗಳು ನಮ್ಮ ಸನಾತನ ಧರ್ಮದ ಅಸ್ಮಿತೆಗಳಾಗಿದ್ದು, ಇವೆಲ್ಲವನ್ನು ಕಾಪಿಟ್ಟುಕೊಂಡು ಹೋಗುವುದು, ಉಳಿಸುವುದು ಯುವ ಸಮುದಾಯದ ಕರ್ತವ್ಯವಾಗಿದೆ. ಈ ನೆಲದ ಮೂಲ ಸಂಪ್ರದಾಯ ಉಳಿದಲ್ಲಿ ಸಂಸ್ಕಾರ ಉಳಿದೀತು ದೇಶ ಉಳಿದೀತು ಅಲ್ಲವೆ.

Umesh

 

 

ಉಮೇಶ ಮುಂಡಳ್ಳಿ, ಭಟ್ಕಳ