ಭಟ್ಕಳ(bhatkal) : ರಸ್ತೆಯ ಮೇಲೆ ಸಿಂಹಗಳ ಹಿಂಡು(herd of lions) ಓಡಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ (viral video) ! ಸಾಗರ ರಸ್ತೆಯಲ್ಲಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹರಿದಾಡುತ್ತಿದೆ !!
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹ್ಞಾಂ….. ಗಾಬರಿಯಾಗಬೇಡಿ ! ಈ ವಿಡಿಯೋ ನೋಡಿದರೆ ಭಟ್ಕಳ ತಾಲೂಕಿನ ಕಿತ್ರೆ ಗುಡ್ಡ ಬಳಿಯ ಸಾಗರ (Sagar) ರಸ್ತೆಯಂತೆ ಗೋಚರಿಸುತ್ತೆ… ಆದರೆ, ಇದು ಭಟ್ಕಳ ತಾಲೂಕಿನದ್ದಲ್ಲ ಎಂಬುದು ಗೊತ್ತಾಗಿದೆ. ‘ಭಟ್ಕಳ ಡೈರಿ’ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಿದಾಗ (fact check) ಇದೊಂದು ಫೇಕ್ ವಿಡಿಯೋ (fake video) ಎಂಬುದು ದೃಢಪಟ್ಟಿದೆ.
ಇದನ್ನೂ ಓದಿ : ಸೆಪ್ಟೆಂಬರ್ ೨೭ರಂದು ವಿವಿಧೆಡೆ ಅಡಿಕೆ ಧಾರಣೆ
ಯೂಟ್ಯೂಬ್ (YouTube), ಇನ್ಸ್ಟಾಗ್ರಾಂ (Instagram) ನಲ್ಲಿ ಹಲವಾರು ದಿನಗಳಿಂದ ಈ ವಿಡಿಯೋ ಓಡಾಡುತ್ತಿದೆ. ವಿಶೇಷವೆಂದರೆ, ಬೇರೆ ಬೇರೆ ರಾಜ್ಯದ ಹೆಸರಿನಲ್ಲಿ ಈ ವಿಡಿಯೋ ವೈರಲ್ (viral video) ಆಗುತ್ತಿದೆ. ಯೂಟ್ಯೂಬ್ ನಲ್ಲಿ ಇತ್ತೀಚಿನ ಅಪ್ಲೋಡ್ ಗಮನಿಸಿದಾಗ, ಮಲ್ಕಾಪುರ ವ್ಲೊಗ್ ಎಂಬ ಹೆಸರಿನ ಚಾನೆಲ್‌ನ ನಲ್ಲಿ ಮಹಾರಾಷ್ಟ್ರದ (Maharashtra) ವಿಡಿಯೋ ಎಂದು ಅಪ್ಲೋಡ್ ಆಗಿದೆ. ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಜಲಗಾಂವ ಜಾಮೋಡ ಹತ್ತಿರದ ವಿಡಿಯೋ ಎಂದು ಬರೆಯಲಾಗಿದೆ.
ವೈರಲ್ ವಿಡಿಯೋ (Viral video)ವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ರೀಲ್ ನಲ್ಲಿ ವೀಕ್ಷಿಸಬಹುದು.