ಭಟ್ಕಳ(Bhatkal): ಕಳೆದ ೪೨ ವರ್ಷಗಳಿಂದ ಶಿಕ್ಷಕಿಯಾಗಿ ಭಟ್ಕಳ ತಾಲೂಕಿನ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ  ವನಿತಾ ಭಟ್ಟ ಅವರನ್ನು ಬೀಳ್ಕೊಡಲಾಯಿತು (Farewell). ಪ್ರಸ್ತುತ ಅವರು ಮುರ್ಡೇಶ್ವರದ (Murdeshwar) ೧೫೮ ವರ್ಷಗಳ ಇತಿಹಾಸ ಹೊಂದಿರುವ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶಾಲೆಯ ಎಸ್.ಡಿ.ಎಂ.ಸಿ., ಶಿಕ್ಷಕರ ಸಂಘ ಹಾಗೂ ಮಕ್ಕಳ ಪಾಲಕರ ವತಿಯಿಂದ ವನಿತಾ ಭಟ್ಟ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿ ನೆನಪಿನ ಕಾಣಿಕೆಯನ್ನು ನೀಡಿ ಬೀಳ್ಕೊಡಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವನಿತಾ ಭಟ್ಟ ಅವರ ನಿಸ್ವಾರ್ಥ ಸೇವೆಯನ್ನು ಹಾಗೂ ಅವರು ಮಕ್ಕಳಲ್ಲಿ ತೋರಿಸುವ ಪ್ರೀತಿಯನ್ನು ಅತಿಥಿಗಳು ಶ್ಲಾಘಿಸಿದರು.  ಇವರು ಸೇವೆ ಸಲ್ಲಿಸಿದ ಶಾಲೆಯಲ್ಲಿ ಮುತುವರ್ಜಿ ವಹಿಸಿ ತಾವೇ ಸ್ವತಹ ಖರ್ಚು ಮಾಡಿ ಶಾಲಾ ವಾತಾವರಣವನ್ನು ಉತ್ತಮವಾಗಿಡುವುದಕ್ಕೆ ಪ್ರಯತ್ನಿಸಿದ್ದರು. ಮಕ್ಕಳಿಗೆ ಪಾಠೋಪಕರಣಗಳನ್ನು ಹಾಗೂ ಶಾಲೆಯಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿದ್ದನ್ನು ಅತಿಥಿಗಳು ಸ್ಮರಿಸಿದರು. ತಮ್ಮ ಉತ್ತಮ ಸೇವೆಯಿಂದ ತಾಲೂಕಾ ಮಟ್ಟದ ಉತ್ತಮ ಶಿಕ್ಷಕಿ ಹಾಗೂ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿಯನ್ನೂ ವನಿತಾ ಭಟ್ಟ ಗಳಿಸಿದ್ದರು. ತಮ್ಮ ಸೇವಾ ಅವಧಿಯಲ್ಲಿ ಅನೇಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವೈಯಕ್ತಿಕವಾಗಿಯೂ ಸಹಾಯ ಮಾಡಿದ್ದನ್ನು ಪಾಲಕರು ಸ್ಮರಿಸಿಕೊಂಡರು.

ಇದನ್ನೂ ಓದಿ : ಕಾರು ಡಿಕ್ಕಿಯಾಗಿ ಸ್ಕೂಟರ್‌ ಮೇಲಿದ್ದ ನಾಲ್ವರಿಗೆ ಗಾಯ

ಮುರ್ಡೇಶ್ವರ (Murudeshwar) ಗಂಡು ಮಕ್ಕಳ ಶಾಲೆಯಲ್ಲಿ ಬೀಳ್ಕೊಡುಗೆ (Farewell) ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಇದೇ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಪಾತಿಮಾ ಫರ್ನಾಂಡೀಸ್ ಅವರನ್ನೂ ಸನ್ಮಾನಿಸಿ ಬೀಳ್ಕೊಡಲಾಯಿತು. ಶಿಕ್ಷಕಿ ಶಾಲಿನ ಭಟ್ಟ ಸ್ವಾಗತಿಸಿದರು, ಗಾಯತ್ರಿ ಮೊಗೇರ ನಿರ್ವಹಿಸಿದರು. ಬೀಬಿ ನಾಯ್ಕ ವಂದಿಸಿದರು.

ಇದನ್ನೂ ಓದಿ :  ಬೈಕಿನಲ್ಲಿ ಬಂದು ಅಡಿಕೆ ಕದ್ದೊಯ್ದರು

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ, ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಬು ಆಚಾರಿ, ಶಿಕ್ಷಕರ ಸಂಘದ ಖಜಾಂಚಿ ರಫೀಕ್, ಜಿಲ್ಲಾ ಸಂಘದ ಸದಸ್ಯ ಎಂ.ಎನ್.ನಾಯ್ಕ, ಸದಸ್ಯ ಎಂ.ವಿ.ಹೆಗಡೆ, ಪ್ರಶಾಂತ ಕಾಯ್ಕಿಣಿ, ದಿನೇಶ ಭಂಡಾರಿ, ಸಿ.ಆರ್.ಪಿ. ಎಸ್.ಆರ್.ಮೇಸ್ತ, ಪೂರ್ಣಿಮಾ ನಾಯ್ಕ, ಬಿದ್ರಮನೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಂಕರ ನಾಯ್ಕ, ಸಾಹಿತಿ ಶಂಭು ಹೆಗಡೆ, ಪಾಲಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಇದನ್ನೂ ಓದಿ : ವೈದಿಕರು ಸನ್ಮಾರ್ಗದ ಪ್ರವರ್ತಕರಾಗಬೇಕು: ರಾಘವೇಶ್ವರ ಶ್ರೀ