ಶಿರಸಿ : ಕೃಷಿ ಕಾರ್ಯಕ್ಕೆಂದು ಗದ್ದೆಗೆ ಹೋಗಿದ್ದ ರೈತ ಹಳ್ಳದಲ್ಲಿ ಬಿದ್ದು ಮೃತಪಟ್ಟ(farmer died) ಘಟನೆ ಶಿರಸಿ ತಾಲೂಕಿನ ತಾರಗೋಡ ಗ್ರಾಮದಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ತಾರಗೋಡಿನ ಗುಡ್ಡೆಕೊಪ್ಪ ಸದಾಶಿವಳ್ಳಿ ನಿವಾಸಿ ರಾಜೇಶ ಗಣಪತಿ ನಾಯ್ಕ(೪೦) ಮೃತ ದುರ್ದೈವಿ ಕೃಷಿಕ. ಜುಲೈ ೨೮ರಂದು ರವಿವಾರ ಬೆಳಿಗ್ಗೆ ೯ ಗಂಟೆಗೆ ಮನೆ ಸಮೀಪದ ಗದ್ದೆಯಲ್ಲಿ ಕೃಷಿ ಚಟುವಟಿಕೆಗೆ ತೆರಳಿದ್ದರು. ಮದ್ಯಾಹ್ನ ೧೨ ಗಂಟೆಯ ಅಂತರದಲ್ಲಿ ಗದ್ದೆಯಲ್ಲಿ ಹಾಯ್ದು ಹೋದ ನೀರು ಹರಿಯುವ ಹಳ್ಳದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ತಲೆಯ ಮತ್ತು ಕುತ್ತಿಗೆಯ ಹಿಂಬದಿಗೆ ಹಾಗೂ ಬೆನ್ನಿಗೆ ಒಳನೋವುಪಡಿಸಿಕೊಂಡು ಮೃತಪಟ್ಟಿದ್ದಾರೆ (farmer died). ಈ ಕುರಿತು ಮೃತನ ಪತ್ನಿ ಕರೆವ್ವ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಕಾಳಿನದಿ ಪ್ರವಾಹದ ಮೊದಲ ಮುನ್ನೆಚ್ಚರಿಕೆ ಸೂಚನೆ