Follow up news of Mangalore accident
ಮಂಗಳೂರು: Follow up/ನಗರದ ಕೂಳೂರು ಕಮಾನು ಸೇತುವೆಯ ತಡೆಗೋಡೆಗೆ ಮಂಗಳವಾರ ನಸುಕಿನ ವೇಳೆಗೆ ಕಾರೊಂದು ಡಿಕ್ಕಿ ಹೊಡೆದು ಕಾರು ಚಲಾಯಿಸುತ್ತಿದ್ದ ಭಟ್ಕಳ (Bhatkal) ಮೂಲದ ಮೊಹಮ್ಮದ್ ಇಫಾಮ್ ಶಾಬಂದ್ರಿ (೧೮) ಎಂಬವರು ಗಾಯಗೊಂಡು ಬಳಿಕ ಮೃತಪಟ್ಟಿದ್ದರು. ದುರ್ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮೊಹಮ್ಮದ್ ಮಲ್ಪಾ (20) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೆ, ಕಾರಿನಲ್ಲಿದ್ದ ಮೊಹಮ್ಮದ್ ಔಫ್ (22), ಮೊಹಮ್ಮದ್ ನೂಹ (20), ದಾಮಿಸ್ ರುಕ್ಕುದ್ದೀನ್ (19) ಅಪಾಯದಿಂದ ಪಾರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯುವಕರ ತಂಡ ಪ್ರವಾಸಕ್ಕೆಂದು ಭಟ್ಕಳದಿಂದ ಕೇರಳದ (Kerala) ವಯನಾಡಿಗೆ (Wayanad) ಕಾರಿನಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಫೆಬ್ರವರಿ ೯ರಂದು ರಾತ್ರಿ ಭಟ್ಕಳದಿಂದ ಹೊರಟ ಕಾರು ತಡರಾತ್ರಿ ೧.೩೦ರ ವೇಳೆಗೆ ಕೂಳೂರು ತಲುಪಿತ್ತು. ಈ ವೇಳೆ ನಿದ್ರೆಯ ಮಂಪರಿನಲ್ಲಿ ಅಥವಾ ಇನ್ಯಾವುದೋ ಕಾರಣದಿಂದ ಇಫಾಮ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೂಳೂರು ಹಳೆಯ ಸೇತುವೆಯ ಬಲಭಾಗದ ಆವರಣಗೋಡೆಗೆ ಡಿಕ್ಕಿ ಹೊಡೆದು, ಬಳಿಕ ಎಡಕ್ಕೆ ತಿರುಗಿ ಸೇತುವೆಯ ಎಡಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿತ್ತು. ಪರಿಣಾಮ ಇಫಾಮ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದರು.
ಇದನ್ನು ಓದಿ: Mahashivaratri/ ಮುರ್ಡೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ
ಕೂಳೂರಿನ ಹಳೆ ಸೇತುವೆಯ ಕಮಾನು ಆಕಾರದ ತಡೆಗೋಡೆ ಹೆಚ್ಚು ಗಟ್ಟಿಮುಟ್ಟಾಗಿರುವುದರಿಂದ ಕಾರು ಡಿಕ್ಕಿ ಹೊಡೆದರೂ, ಸೇತುವೆಯಿಂದ ಕೆಳಕ್ಕೆ ಬಿದ್ದಿಲ್ಲ. ಒಂದು ವೇಳೆ ಕೆಳಕ್ಕೆ ಬಿದ್ದಿದ್ದರೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯಿತ್ತು ಎಂಬುದು ಪೊಲೀಸರ ಅಭಿಪ್ರಾಯವಾಗಿದೆ. ಈ ಕುರಿತು ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (Follow up)
ಇದನ್ನು ಓದಿ: Car Parking/ ತೆರವಿನ ಭೀತಿಯಲ್ಲಿ ಕಾರು ನಿಲ್ದಾಣ



