ಭಟ್ಕಳ: ಕಚ್ಚಾ ರಸ್ತೆಯ ಇಳಿಜಾರಿನಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿರುವಾಗ ನಿಯಂತ್ರಣ ಸಿಗದೆ ಬಿದ್ದು ಗಂಭೀರಗೊಂಡ ಸವಾರ ಅರಣ್ಯ ಇಲಾಖೆಯ ವಾಚ್ ಮ್ಯಾನ್ (Forest watchman) ಮೃತಪಟ್ಟ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅರಣ್ಯ ಇಲಾಖೆಯ ವಾಚ್ ಮ್ಯಾನ್ (Forest watchman) ಬೆಳಕೆ ಬೇದ್ರಿಕೇರಿಯ ಶಂಕರ ತಂದೆ ಮಾಸ್ತಪ್ಪ ನಾಯ್ಕ (೫೬) ಮೃತ ದುರ್ದೈವಿ. ಇವರು ದಿನಾಂಕ: ೨೨-೦೧-೨೦೨೫ರಂದು ಬೆಳಿಗ್ಗೆ ೭:೩೦ ಗಂಟೆಗೆ ತಮ್ಮ ಮೋಟಾರು ಸೈಕಲನ್ನು ಅಜಾಗರುಕತೆಯಿಂದ ಬಂದು ಭಟ್ಕಳ ತಾಲೂಕಿನ ಮುಟ್ಟಳ್ಳಿ ರಸ್ತೆಯ ಮೂಲಕ ಕಿರಿದಾಗಿದ್ದ ಬಲ್ಸೆಮನೆಯ ಕೌಶಿಕ್ ದೇವೇಂದ್ರ ನಾಯ್ಕ ಅವರ ಮನೆಗೆ ಬರುವ ಕಚ್ಚಾ ರಸ್ತೆಯ ಇಳಿಜಾರಿನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದರು. ಆಗ ಮೋಟಾರು ಸೈಕಲ ನಿಯಂತ್ರಣಕ್ಕೆ ಬಾರದೇ ಮೋಟಾರು ಸೈಕಲ್ ಸಮೇತ ಜಾರಿ ಬಿದ್ದರು. ಅಲ್ಲಿಂದ ಚಿಕಿತ್ಸೆಗೆ ಭಟ್ಕಳ (Bhatkal) ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ  ಕುಂದಾಪುರಕ್ಕೆ (Kundapura) ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸುಮಾರು ೮:೪೫ ಗಂಟೆಗೆ ಮೃತ ಪಟ್ಟಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: School children/ ಠಾಣೆಗೆ ಬಂದ ಶಾಲಾ ಮಕ್ಕಳು