ಭಟ್ಕಳ (Bhatkal) : ಬೈಕುಗಳ ನಡುವೆ ಡಿಕ್ಕಿ (bike collision) ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಬೆಂಗ್ರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಕಾಮತ ಕ್ಯಾಂಟೀನ್ (Kamat Canteen) ಬಳಿ ಮಾ.೭ರಂದು ರಾತ್ರಿ ೮.೩೫ರ ಸುಮಾರಿಗೆ ಅಪಘಾತ ಸಂಭವಿಸಿದೆ. ಭಟ್ಕಳ ತಾಲೂಕಿನ ಹೆಬಳೆ ಗಾಂಧಿನಗರ ನಿವಾಸಿ ಹೇಮಂತ ಗಣಪತಿ ಮೊಗೇರ (೩೭) ತಮ್ಮ ಸಹೋದರಿ ಪಾರ್ವತಿ ರವಿ ಮೊಗೇರ ಅವರನ್ನು ಕೂಡ್ರಿಸಿಕೊಂಡು ಮುರುಡೇಶ್ವರ (Murudeshwar) ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದಾಗ ಅಪಘಾತ (Accident) ಸಂಭವಿಸಿದೆ.
ಇದನ್ನೂ ಓದಿ : Women’s cabin/ ಮಹಿಳಾ ಸುರಕ್ಷತಾ ಕ್ಯಾಬಿನ್ ಉದ್ಘಾಟನೆ
ಬೆಂಗ್ರೆಯ ಅಕ್ಷಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ದಾಟಿ ಅಳ್ವೆಕೋಡಿ ರಸ್ತೆಯ ಅಂಚಿನಲ್ಲಿದ್ದಾಗ ಭಟ್ಕಳ ಕಡೆಯಿಂದ ಹೊನ್ನಾವರ (Honnavar) ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಹೊನ್ನಾವರ ತಾಲೂಕಿನ ಮಾವಿನಕುರ್ವಾ ನಿವಾಸಿ ಗಣೇಶ ಮಂಜುನಾಥ ನಾಯ್ಕ (೩೭) ತಮ್ಮ ಹೆಂಡತಿ ಕುಸುಮಾ ಅವರನ್ನು ಕೂಡ್ರಿಸಿಕೊಂಡು ಹೋಗುತ್ತಿದ್ದರು. ಅವರು ಹೇಮಂತ ಅವರ ಬೈಕ್‌ನ ಹಿಂಬದಿಯ ಎಡಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ (bike collision) ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪಘಾತದಲ್ಲಿ ಎರಡೂ ಬೈಕಿನ ನಾಲ್ವರಿಗೂ ಗಾಯಗಳಾಗಿವೆ. ಈ ಕುರಿತು ಗಣೇಶ ನಾಯ್ಕ ವಿರುದ್ಧ ಹೇಮಂತ ಮೊಗೇರ ಮಾ.೯ರಂದು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.
ಇದನ್ನೂ ಓದಿ : Ernad Express / ಎರ್ನಾಡ್ ಎಕ್ಸ್‌ಪ್ರೆಸ್ ರೈಲು ವಿಸ್ತರಣೆಗೆ ಆಗ್ರಹ