ಭಟ್ಕಳ: ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿ ಕೆಲಸ ಮಾಡಿದ್ದ ಡಾ ಸಹನ್ ಎಸ್ ಕುಮಾರ (39) ಭೋಪಾಲ್‌ನ ಟಿ ಟಿ ನಗರದಲ್ಲಿರುವ ಹೋಟೆಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Doctor died).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದಕ್ಷಿಣ ಕನ್ನಡ (dakshina Kannada) ಜಿಲ್ಲೆಯ ಮೂಡುಬಿದಿರೆ (modubidire) ತಾಲ್ಲೂಕಿನ ತೆಂಕಮಿಜಾರು ಗ್ರಾಮದ ಮೂಲದ ಡಾ ಸಹನ್ ಕುಮಾರ 2021ರಿಂದ 2024ರ ಜೂನ್ ತನಕ ಭಟ್ಕಳ (Bhatkal) ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಬಾಲಾಘಾಟ್‌ನ ಖಾಸಗಿ ಆಸ್ಪತ್ರೆಗೆ ಸೇರಿ ವೈದ್ಯಕೀಯ ಸೇವೆ ಮಾಡುತ್ತಿದ್ದರು.

ಇದನ್ನು ಓದಿ: Sports Meet/ ಭಟ್ಕಳ ತಾಲೂಕು ಕ್ರೀಡಾಕೂಟದಲ್ಲಿ ಆನಂದ ಆಶ್ರಮ ಕಾನ್ವೆಂಟ್ ಪ್ರೌಢಶಾಲೆ ವೀರಾಗ್ರಣಿ

ಮಧ್ಯಪ್ರದೇಶ ವೈದ್ಯಕೀಯ ಮಂಡಳಿಯ ಕೌನ್ಸೆಲಿಂಗ್ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಭೋಪಾಲ್‌ಗೆ ಬಂದಿದ್ದರು. ಆದರೆ ಸಭೆಗೆ ಹಾಜರಾಗುವ ಮುನ್ನವೇ ಹೋಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ (doctor died). ಕೊಠಡಿಯಿಂದ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ.

ಇದನ್ನು ಓದಿ: Cattle bones/ ಗುಡ್ಡದಲ್ಲಿ ಜಾನುವಾರು ಮೂಳೆಗಳು, ಅಸ್ತಿಪಂಜರಗಳು ಪತ್ತೆ

ಮಧ್ಯಾಹ್ನದವರೆಗೂ ಕೊಠಡಿ ತೆರೆದುಕೊಳ್ಳದ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಎರಡು ಮೊಬೈಲ್ ಫೋನ್, ಇಯರ್‌ಫೋನ್ ಹಾಗೂ ಬ್ಯಾಗ್ ಸೇರಿದಂತೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನು ಓದಿ: Honour/ ಭಟ್ಕಳದ ಸಾಧಕರಿಗೆ ಹೊನ್ನಾವರದಲ್ಲಿ ಸನ್ಮಾನ

ಆತ್ಮಹತ್ಯೆಗೆ ಮೊದಲು ಯಾರೊಂದಿಗಾದರೂ ದೂರವಾಣಿ ಕರೆ ಮಾಡಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೂಡುಬಿದಿರೆಗೆ ಕಳುಹಿಸಲಾಗಿದ್ದು, ಕುಟುಂಬಸ್ಥರು ಅಂತಿಮ ವಿಧಿ ವಿಧಿಗಳನ್ನು ನೆರವೇರಿಸಿದ್ದಾರೆ.

ಇದನ್ನು ಓದಿ: Municipal Council/ ನಗರಸಭೆಗೆ ಇನ್ನಷ್ಟು ಗ್ರಾ ಪಂ ಸೇರಿಸಲು ಅಭ್ಯಂತರವಿಲ್ಲ: ಮಂಕಾಳ ಎಸ್ ವೈದ್ಯ 

ಇತ್ತೀಚೆಗೆ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ವೈದ್ಯರು ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ತ್ಯಜಿಸಿರುವ ಸಾಧ್ಯತೆ ವ್ಯಕ್ತವಾಗಿದೆ ಎಂದು ಭೋಪಾಲ್‌ ಟಿ ಟಿ ನಗರ ಠಾಣಾ ಪ್ರಭಾರಿ ಗೌರವ್ ದೋಹರೆ ತಿಳಿಸಿದ್ದಾರೆ.

ಇದನ್ನು ಓದಿ: KDP meeting/ ‘ಕಂದಾಯ ಇಲಾಖೆಯವರೇ ಏಜೆಂಟರನ್ನು ಮಾಡುತ್ತಿದ್ದಾರೆ’