ಭಟ್ಕಳ: ತಾಲೂಕಿನ ಮಾರುಕೇರಿಯ ಹೂತ್ಕಳ ಶ್ರೀ ಧನ್ವಂತರಿ ದೇವಸ್ಥಾನದ ಆವರಣದಲ್ಲಿ ಮಾರುಕೇರಿ ಮಂಡಲದ ಹಿಂದೂ ಸಮ್ಮೇಳನ ಸಮಿತಿಯಿಂದ ಹಿಂದೂ ಸಮ್ಮೇಳನವನ್ನು (Hindu conference) ಅದ್ದೂರಿಯಾಗಿ ಆಚರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶಿರಸಿ ಆರೆಸ್ಸೆಸ್ ಬೌದ್ಧಿಕ ಪ್ರಮುಖ ಮಧು ಕಿರುಗಾರ, ಧರ್ಮ ಎಂದರೆ ಪೂಜಾ ಪದ್ದತಿ ಅಲ್ಲ. ಬದಲಾಗಿ ಧರ್ಮ ಅಂದರೆ ಅದೊಂದು ಜೀವನ ಪದ್ದತಿಯಾಗಿದೆ. ಧರ್ಮವು ಸರಿಯಾದ ದಾರಿ, ನಡವಳಿಕೆ ತಿಳಿಸುತ್ತದೆ. ನಮ್ಮ ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರ ಅಳಿಸಲು ನಾವು ಎಂದಿಗೂ ಬಿಡಬಾರದು. ನಮ್ಮ ಧರ್ಮವನ್ನು ನಾವೇ ಕಾಪಾಡಿಕೊಳ್ಳಬೇಕು. ಹೊರದೇಶದವರೇ ನಮ್ಮ ಧರ್ಮ, ಸಂಸ್ಕೃತಿಯನ್ನು ಇಷ್ಟಪಡಬೇಕಾದರೆ, ನಮಗೆ ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರ ಬಗ್ಗೆ ನಿರ್ಲಕ್ಷ್ಯ, ಅಸಡ್ಡೆ ಯಾಕೆ ಎಂದು ಪ್ರಶ್ನಿಸಿದ ಅವರು, ಸ್ವ ಲಾಭಕ್ಕಾಗಿ ಹಿಂದೂ ಧರ್ಮವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಜಾತಿಗೊಂದು ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
police inspector/ ಭಟ್ಕಳ ಗ್ರಾಮೀಣ ಠಾಣೆಗೆ ನೂತನ ಇನ್ಸ್ಪೆಕ್ಟರ್
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಶಿಕ್ಷಕ ಗಜಾನನ ಅವಧಾನಿ ಅವರು, ಹಿಂದೂಗಳಲ್ಲಿ ಒಗ್ಗಟ್ಟು ಮುಖ್ಯ. ಹಿಂದೂಗಳು ನಾವೆಲ್ಲರೂ ಒಂದು ಎಂದು ಬಾಳಿದಾಗ ಮಾತ್ರ ಎಂತಹ ಸನ್ನಿವೇಶಗಳನ್ನೂ ಕೂಡ ಎದುರಿಸಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಮ್ಮೇಳನ (Hindu conference) ಸಮಿತಿಯ ಅಧ್ಯಕ್ಷ ನಾರಾಯಣ ಭಟ್ಟ ಮಾತನಾಡಿದರು.
Woman died/ ವ್ಯಕ್ತಿಯೋರ್ವ ಪದೇ ಪದೇ ಫೋನ್ ಮಾಡಿದ್ದಕ್ಕೆ ನೇಣು ಬಿಗಿದುಕೊಂಡ ಮಹಿಳೆ
ವೇದಿಕೆಯಲ್ಲಿ ಶ್ರೀಕಂಠ ಹೆಬ್ಬಾರ, ಬಡಿಯಾ ಗೊಂಡ, ನಾಗೇಂದ್ರ ಶೆಟ್ಟಿ, ಮಂಜುನಾಥ ಮೊಗೇರ, ಗಣಪಯ್ಯ ಗೊಂಡ, ಗೋಪಾಲ ಪ್ರಭು, ಕೇಶವ ಭಂಡಾರಿ, ರೇವತಿ ನಾಯ್ಕ, ಈಶ್ವರ ನಾಯ್ಕ ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಇದ್ದರು. ಸಮಾಜದ ಹಿರಿಯರನ್ನು ಗೌರವಿಸಿ ಸನ್ಮಾನಿಸಲಾಯಿತು.
appeal/ ಟ್ಯಾಕ್ಸಿ ಚಾಲಕರ ವಿರುದ್ಧ ಆಟೋರಿಕ್ಷಾ ಚಾಲಕರ ಅಸಮಾಧಾನ- ಶಹರ ಪೊಲೀಸ್ ಠಾಣೆಗೆ ಮನವಿ
ಗಜಾನನ ಹೆಬ್ಬಾರ ಕಿತ್ರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಪಿಲ ಭಟ್ಟ ನಿರೂಪಿಸಿದರು. ಮಹೇಶ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕೋಟಖಂಡದಿಂದ ಧನ್ವಂತರಿ ದೇವಸ್ಥಾನದ ವರೆಗೆ ಆಕರ್ಷಕ ಶೋಭಾ ಯಾತ್ರೆ ನಡೆಯಿತು. ಮೆರವಣಿಗೆಯಲ್ಲಿ ಗಣಪಯ್ಯ ಗೊಂಡ ಮಾರುಕೇರಿ ಅವರು ತಲೆ ಮೇಲೆ ಕಳಸ ಹೊತ್ತು ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು.



